ಬೆಳಗಾವಿ: ಲಕ್ಷ್ಮಣ ನಿಂಬರ್ಗಿ ಎಸ್ ಪಿ ಬೆಳಗಾವಿ ಹಾಗೂ ಮಹಾನಂದ ನಂದಗಾವಿ ಹೆಚ್ಚುವರಿ ಎಸ್ ಪಿ ಬೆಳಗಾವಿ ಹಾಗೂ ಶ್ರೀ ಬಸವರಾಜ ಎಲಿಗಾರ ಡಿ ಎಸ್ ಪಿ ಚಿಕ್ಕೋಡಿ ಇವರು ನೇತೃತ್ವದ ತಂಡದಲ್ಲಿ ಶ್ರೀ ಸಂಗಮೇಶ್ವರ ಶಿವಯೋಗಿ ಸಿಪಿಐ ನಿಪ್ಪಾಣಿ ವೃತ್ತ ಮತ್ತು ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ್ ಸಿಬ್ಬಂದಿ ವರ್ಗದವರಾದ ಎ ಎಸ ಐ ಎಂ ಜಿ ಮುಜಾವರ, ಹೆಡ್ ಕಾನ್ಸ್ಟೇಬಲ್ ಆರ್ ಜಿ ದಿವಟೆ, ಜಿ ಎಂ ಭೋಯಿ, ಎಂ ಬಿ ಕಲ್ಯಾಣಿ, ಪಿ ಎಂ ಗಸ್ತಿ, ವಿ ಎಸ್ ಅಸೋದೆ, ಎಸ್ ಜಿ ಮುಲ್ಲಾ, ಇವರು ಮೋಟಾರ್ಸೈಕಲ್ ಸ್ಪೇರ್ ಪಾರ್ಟ್ಸ್ ಹಾಗೂ ಮನೆ ಕಳವು ಮಾಡಿದ ಆರೋಪಿತರಾದ ನಿಹಾಲ್ ಅಸ್ಲಂ ಬಾಲೇಖಾನ್ ಸಾಕಿನ್ ಮಗರ ಮಚ್ಚ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಮತ್ತು ರಮೀಜಾ ದಸ್ತಗೀರ್ ಮಲ್ಲೊಡಿ ಸಂಭಾಜಿನಗರ್ ನಿಪ್ಪಾಣಿ ಇವರನ್ನು ಬಂಧಿಸಿದ ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸುಮಾರು ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಬೆಲೆಬಾಳುವ ದ್ವಿಚಕ್ರವಾಹನದ ಸಾಮಾನುಗಳನ್ನು ಹಾಗೂ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಬಂಗಾರದ ಮಂಗಳಸೂತ್ರ ಹಾಗೂ ಬಂಗಾರದ ನಕ್ಲೆಸ್ ಸೇರಿದಂತೆ ಕೃತ್ಯಕ್ಕೆ ಉಪಯೋಗಿಸಿದ ಸುಮಾರು ಎರಡು ಲಕ್ಷ ರೂಪಾಯಿ ಬೆಲೆಬಾಳುವ ವ್ಯಾಗನಾರ್ ಕಾರ್ ಎಂ ಎಚ್ ನಾಲ್ಕು ಐಕ್ಯೂ ಹದಿಮೂರು ಎಪ್ಪತೆಂಟು ಸಂಖ್ಯೆ ಹೊಂದಿರುವ ನಾಲ್ಕು ಚಕ್ರ ವಾಹನ ಹೀಗೆ ಒಟ್ಟು ಸುಮಾರು ನಾಲ್ಕು ಲಕ್ಷದ ಹದಿಮೂರು ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಕಾರಾಗೃಹಕ್ಕೆ ರವಾನಿಸುತ್ತಾರೆ.