ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಬ.ಕಲ್ಯಾಣ ಪೊಲೀಸ್ ಠಾಣೆಯಲ್ಲಿ 2010 ನೇ ಸಾಲಿನಲ್ಲಿ ದಾಖಲಾದ NDPS ಪ್ರಕರಣದ ಆರೋಪಿ ನಿಶಾಂತ ತಂದೆ ತಂದೆ ಭಗವಾನ್ ಕಾವಡೆ, ಸಾ: ಸುಭಾಷ್ ನಗರ್ ಬಾರ್ಶಿ, ತಾ & ಜಿ : ಸೋಲಾಪುರ. ಇತನು ಪ್ರಕರಣ ದಾಖಲಾಗಿದ್ದಿನಿಂದ ತಲೆ ಮರೆಸಿಕೊಂಡಿದ್ದು, ಇತನ ಪತ್ತೆ ಕುರಿತು ಠಾಣೆಯ ಸಿಬ್ಬಂದಿ ಶ್ರೀ, ಘಾಳಯ್ಯ ಸ್ವಾಮಿ, ಶ್ರೀ, ಯಲ್ಲಪ್ಪ, ಶ್ರೀ, ಶಿವರಾಯ ರವರು ಕೂಡಿಕೊಂಡು ಆರೋಪಿಯು ಮಹಾರಾಷ್ಟ್ರದ ಸೊಲಾಪೂರದಲ್ಲಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಂದ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತಾರೆ.
13 ವರ್ಷಗಳಿಂದ ತಲೆ ಮರೆಸಿಕೊಂಡ NDPS ಪ್ರಕರಣದ ಆರೋಪಿತನನ್ನು ಪತ್ತೆ ಹಚ್ಚಿ ಬಂಧನಕ್ಕೆ ಕಳುಹಿಸಿದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ ಬಹುಮಾನ ನೀಡಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ ಎಂದು ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದರು
ವರದಿ :- ಸಿದ್ದಪ್ಪ ಪಟ್ಟೇದಾರ್