ಲಘಟಗಿ ಪಟ್ಟಣದ ಹಳಿಹಾಳ ರಸ್ತೆಯ ಯುವಶಕ್ತಿ ಸರ್ಕಲ್ ಬಳಿಯಲ್ಲಿ ದಿನಾಂಕ. 11-05-2022 ರಂದು ನಿಂತಿದ್ದ ಹುಬ್ಬಳ್ಳಿ ಎಫ್.ಸಿ.ಐ ಗುದಾಮಿನಿಂದ ದಾಂಡೇಲಿಗೆ ಹೋಗುತ್ತಿದ್ದ 260 ಚೀಲ ಅಕ್ಕಿ ತುಂಬಿದ ಲಾರಿಯನ್ನು ಅಪಹರಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸದಿಂತೆ ಲಾರಿ ಸಮೇತ ಆರೋಪಿಯನ್ನು ಕಲಘಟಗಿ ಪೊಲೀಸ್ರು ಬಂದಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಶೈಲ ಕೌಜಲಗಿ ರವರು ಹಿರಿಯ ಅಧಿಕಾರಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡು ತಾಲೂಕಿ ಅರೆಬಸನಕೊಪ್ಪ ಗ್ರಾಮದ ಹತ್ತಿರ ಕಳ್ಳತನವಾದ ಜ್ಯೋತಿ ಟ್ರಾನ್ಸಪೋರ್ಟ ಕಂಪನಿಯ ಲಾರಿಯನ್ನು (ಕೆ.ಎ2525/ಸಿ280) ವಶಪಡಿಸಿಕೊಂಡಿದ್ದು, ತಾಲೂಕಿನ ಶಿಗಿಗಟ್ಟಿ ಗ್ರಾಮದ ಶಂಕ್ರಯ್ಯ ಬಸಯ್ಯ ಹಿರೇಮಠ ಎಂಬಾತನೆ ಲಾರಿ ಅಪಹರಣ ಮಾಡಿದ ಆರೋಪಿಯಾಗಿದ್ದಾನೆ.
ಪ್ರಕರಣದ ತನಿಖಾ ತಂಡದಲ್ಲಿರುವ ಎಲ್ಲ ಅಧಿಕಾರಿ/ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ. ಪಿ ಕೃಷ್ಣಕಾಂತ. ಐ.ಪಿ.ಎಸ್ ರುವರು ಅಭಿನಂದನೆ/ಪ್ರಶಂಸನೆಯನ್ನು ಸಲ್ಲಸಿ, ಬಹುಮಾನ ಮಂಜೂರಿಸಿದ್ದಾರೆ.