ದಿನಾಂಕ : 31-10-2021 ರಂದು ಮಹಮ್ಮದ್, ವಾಸ : ದೇರಾಜೆ ಮನೆ , ಇಂದಬೆಟ್ಟು ಗ್ರಾಮ , ಬೆಳ್ತಂಗಡಿ ತಾಲೂಕು ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವುಗೈದಿದ್ದು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 95/2021 ಕಲಂ 454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ಸದ್ರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾನ್ಯ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನವನ ಋಷಿಕೇಶ್ ಭಗವಾನ್ ಐ.ಪಿ.ಎಸ್ , ಶ್ರೀ ಶಿವಕುಮಾರ್ ಗುಣಾರೆ , ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ನಿರ್ದೇಶನದಂತೆ ,, ಶ್ರೀ ಶಿವಾಂಶು ರಜಪೂತ್ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರು , ರವರ ಸೂಚನೆಯಂತ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ , ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ನಂದ ಕುಮಾರ್ , ಪ್ರೊ.ಪಿಎಸ್‌ಐ ಮೂರ್ತಿ , ಎಎಸೈ , ದೇವಪ್ಪ ಎಂಕ , ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್ , ವೃಷಭ , ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ , ಲತೀಫ್ , ವಿಜಯ ಕುಮಾರ್ ರೈ , ವೆಂಕಟೇಶ್ , ಬಸವರಾಜ್ , ಚರಣ್ , ಅವಿನಾಶ್ , ವಾಹನ ಚಾಲಕರಾದ ಮಹಮ್ಮದ್ ಆಸೀಫ್ , ಸತೀಶ್ , ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ , ಸಂಪತ್ ಕುಮಾರ್ ಗಳ ಸಹಾಯದಿಂದ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಅಲ್ಲೋ ಕಾರು , ಪಲ್ಸರ್ ಎನ್ ಎಸ್ ಮೋಟಾರು ಸೈಕಲ್ , ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ ಇವುಗಳ ಒಟ್ಟು ಮೌಲ್ಯ 1,69,500 ರೂಗಳು , , ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು , ನಗದು 1230 ರೂ ಗಳನ್ನು ಸ್ವಾಧೀನಪಡಿಸಿಕೊಂಡು , ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 13,75,930 ರೂಪಾಯಿ ಆಗಿದ್ದು , ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ .