ದಿನಾಂಕ 11-07-2023 ರಂದು ಬೆಳಿಗ್ಗೆ 10:30 ಗಂಟೆಗೆ ಕೆ.ಕೆ.ನಗರದಲ್ಲಿ ವಿಜಯಲಕ್ಷ್ಮಿ
ಮಠ ವಯ: 44 ವರ್ಷ ಇವಳಿಗೆ ಆಪಾದಿತರು ಆಸ್ತಿ ವಿವಾದದಲ್ಲಿ ಜಗಳ ತೆಗೆದು ಹರಿತವಾದ ಆಯುಧದಿಂದ
ಚುಚ್ಚಿ ಕೊಲೆ ಮಾಡಿ ಮೃತಳ ಮಕ್ಕಳಿಗೂ ಸಹ ಕೊಲೆ ಮಾಡುವ ಉದ್ದೇಶದಿಂದ ಗಂಭೀರ ಗಾಯಗೊಳಿಸಿ ಆಟೋ
ಮೋಟಾರ ಸೈಕಲ್‌ಗಳ ಮೇಲೆ ಓಡಿ ಹೋಗಿದ್ದು ಅವರ ಮೇಲೆ ಕ್ರಮ ಜರುಗಿಸುವಂತೆ ಮೃತಳ ಮಗ ಮಹಾದೇವ
ಮಲಕಯ್ಯ ಮಠರವರು ದೂರು ಸಲ್ಲಿಸಿದ್ದರಿಂದ ಸಬ್ ಅರ್ಬನ್ ಪೊಲೀಸ ಠಾಣೆ ಗುನ್ನೆ ನಂ 189/2023 ಕಲಂ
302, 307, 323, 324, 326, 448, 504, 506 ಜೊತೆ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,
ಸದರಿ ಪ್ರಕರಣದ ಪತ್ತೆ ಕುರಿತು ಮಾನ್ಯ ಶ್ರೀ ಅಣ್ಣೂರು ಶ್ರೀನಿವಾಸುಲು ಐ.ಪಿ.ಎಸ್., (ಕಾ&ಸು) ಉಪ-ಪೊಲೀಸ್
ಆಯುಕ್ತರು ಕಲಬುರಗಿ ನಗರ, ಮಾನ್ಯ ಶ್ರೀ ಎ ಚಂದ್ರಪ್ಪಾ ಕೆ.ಎಸ್.ಪಿ.ಎಸ್.,(ಅ&ಸಂ) ಉಪ-ಪೊಲೀಸ್
ಆಯುಕ್ತರು ಕಲಬುರಗಿ ನಗರ ಹಾಗೂ ಸಬ್ ಅರ್ಬನ್ ಉಪ-ವಿಭಾಗ ಎ.ಸಿ.ಪಿ ರವರಾದ ಶ್ರೀ ಗೀತಾ ಬೇನಾಳ
ರವರ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಕಾಂಬಳೆ ಪಿ.ಐ ಸಬ್ ಅರ್ಬನ್ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ
ಕವಿತಾ ಚವ್ಹಾಣ ಪಿ.ಎಸ್.ಐ, ಹುಸೇನ್‌ಸಾಬ್ ಪಿ.ಎಸ್.ಐ, ಸಲಿಮೋದ್ದಿನ್ ಪಿ.ಎಸ್.ಐ, ನಾಗರಾಜ ಎ.ಎಸ್.ಐ,ಪುಂಡಲಿಕ್ ಎ.ಎಸ್.ಐ ಮತ್ತು ಸಿಬ್ಬಂದಿಯವರಾದ ಮಲ್ಲಿಕಾರ್ಜುನ ಪಿ.ಸಿ-88, ನಾಗೇಂದ್ರ ಪಿ.ಸಿ-464, ಪ್ರಕಾಶ
ಪಿ.ಸಿ-458, ಪ್ರಶಾಂತ ಪಿ.ಸಿ-109, ಅನೀಲ ಪಿ.ಸಿ-206, ಶಿವರಾಜ ಪಿ.ಸಿ-288, ಅನೀಲ ಪಿ.ಸಿ-511
ರವರನ್ನೊಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಇಂದು ದಿನಾಂಕ 13-07-2023 ರಂದು ಪ್ರಕರಣದ
ಆರೋಪಿತ ರನ್ನು ದಸ್ತಗಿರಿ ಮಾಡಿ ಆಪಾದಿತರಿಂದ ಕೃತ್ಯಕ್ಕೆ ಉಪಯೋಗಿಸಿದ ತಲವಾರ, 02 ಚಾಕುಗಳು ಹಾಗೂ
ಆಟೋ, ಮೋಟಾರ ಸೈಕಲ್, 03 ಮೋಬೈಲಗಳನ್ನು ಜಪ್ತಿಪಡಿಸಿಕೊಂಡು ಆಪಾದಿತರ ವಿರುದ್ಧ ದಸ್ತಗಿರಿ ಕ್ರಮ
ಕೈಗೊಂಡಿದ್ದು ಇರುತ್ತದೆ.
ದಿನಾಂಕ: 13-07-2023
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್. ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.
ನನ್ ಸಹ ರಾಡಕರ ನಗರ
ಆರೋಪಿತರು ಕೃತ್ಯಕ್ಕೆ ಬಳಸಿರುವ ವಸ್ತುಗಳೊಂದಿಗೆ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳ ತಂಡ