ಇಬ್ಬರು ಅಂತರಾಜ್ಯ ಕಳರಿಂದ, ಕಳುವು ಮಾಡಿದ 17 ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್.ಓ.ಸಿ ಗಳನ್ನು ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿರುತ್ತಾರೆ. ಇವುಗಳ ಮೌಲ್ಯ ಸುಮಾರು 12 ಕೋಟಿ 56 ಲಕ್ಷ
ಬೆಂಗಳೂರು ನಗರದಲ್ಲಿ ಸಕ್ರಿಯವಾಗಿದ್ದ ಒಂದು ತಂಡವು ಬೇರೆ ಬೇರೆ ರಾಜ್ಯದಿಂದ ಕಾರುಗಳನ್ನು ಕಳ್ಳತನ ಮಾಡಿ, ಅವುಗಳನ್ನು ಬೆಂಗಳೂರಿಗೆ ತಂದು ಅವುಗಳಿಗೆ ಅದೇ ಮಾದರಿಯ ಬೇರೆ ನೊಂದಣಿ ನಂಬರ್‌ಗಳನ್ನು ಹಾಕಿ ಆ ನಂಬರ್‌ಗೆ ಸಂಬಂಧಿಸಿದಂತೆ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಅದೇ ರೀತಿ ವಿವಿಧ ಕಾರ್‌ಗಳು ಬ್ಯಾಂಕ್‌ನಲ್ಲಿ ಲೋನ್ ತೆಗೆದುಕೊಂಡು ಲೋನ್‌ನ್ನು ಕಟ್ಟದೇ ಬ್ಯಾಲೆನ್ಸ್ ಉಳಿಸಿಕೊಂಡಿರುವ ಕಾರ್‌ಗಳನ್ನು ಅಡಮಾನವಾಗಿ ಇಟ್ಟುಕೊಂಡು, ಅವುಗಳಿಗೂ ಸಹ ನಕಲಿ ಎನ್.ಓ.ಸಿ. ಗಳನ್ನು ಸೃಷ್ಟಿಸಿ ಅವುಗಳನ್ನು ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳ, ಪಶ್ಚಿಮ ವಿಭಾಗದವರು ಯಶಸ್ವಿಯಾಗಿರುತ್ತಾರೆ. ಆರೋಪಿಗಳ ಕಡೆಯಿಂದ ದುಬಾರಿ ಬೆಲೆಯ ರೇಂಜ್ ರೋವರ್, ಜಾಗ್ವಾರ್ ಕಾರು ಸೇರಿದಂತೆ ವಿವಿಧ ಕಂಪನಿಯ ಒಟ್ಟು 17 ಕಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 2,56,00,000/- (ಎರಡು ಕೋಟಿ ಐವತ್ತಾರು ಲಕ್ಷ ರೂಪಾಯಿ). ಈ ಕುರಿತು ಸಿಸಿಬಿ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ
ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಸಂಘಟಿತ ಅಪರಾಧ ದಳ (ಪಶ್ಚಿಮ) ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.