ಶಿಕ್ಷಕನೊಬ್ಬ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.. ಆದ್ರೆ ಲೈಂಗಿಕ ಕ್ರಿಯೆಗೆ ಬಾಲಕಿ ಸಹಕಾರ ನೀಡದ ಕಾರಣದಿಂದ ಆಕ್ರೋಶಗೊಂಡ ಶಿಕ್ಷಕ ಬಾಲಕಿಯನ್ನು ಕೊಲೆ ಮಾಡಿದ್ದಾನೆ.. ಗುಜರಾತ್‌ನ ದಾಹೋದ್ ಜಿಲ್ಲೆಯ ಸಿಂಗ್ವಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಸಿಂಗ್ವಾಡ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕನೇ ಈ ಕೃತ್ಯ ಎಸಗಿರುವಾತ.
ಪೊಲೀಸರು ಸದ್ಯ ಮುಖ್ಯಶಿಕ್ಷಕ ಗೋವಿಂದ್ ನಾಥ್‌ನನ್ನು ಬಂಧಿಸಿದ್ದಾರೆ.. ವಿಚಾರಣೆ ವೇಳೆ ಬಾಲಕಿಯನ್ನೂ ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.. ನಾಲ್ಕು ದಿನಗಳ ಹಿಂದೆ ಸಿಂಗ್ವಾಡ್‌ನ ಸರ್ಕಾರಿ ಶಾಲೆಯ ಕಾಂಪೌಂಡ್ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು.. ಪರಿಶೀಲನೆ ನಡೆಸಿದಾಗ, ಮಗುವಿನ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ಖಾತ್ರಯಾಗಿತ್ತು.. ಪೊಲೀಸರು ಈ ಬಗ್ಗೆ ಅನುಮಾನದ ಮೇರೆಗೆ ಮುಖ್ಯ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ.. ಈ ವೇಳೆ ಮುಖ್ಯಶಿಕ್ಷಕ ಗೋವಿಂದ್ ನಾಥ್ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಮುಖ್ಯ ಶಿಕ್ಷಕ ಗೋವಿಂದ್ ನಾಥ್ ಕಾರಿನಲ್ಲಿ ಹೋಗುತ್ತಿದ್ದಾಗ ಬಾಲಕಿ ನಡೆದುಕೊಂಡು ಹೋಗುತ್ತಿದ್ದಳು.. ಕಾರು ನಿಲ್ಲಿಸಿ ಆಕೆಯನ್ನು ಹತ್ತಿಸಿಕೊಂಡು ಶಾಲೆಗೆ ಬಿಡುವುದಾಗಿ ಹೇಳಿದ್ದ.. ಆದ್ರೆ ದಾರಿ ಮಧ್ಯೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ.. ಆದ್ರೆ ಬಾಲಕಿ ಇದಕ್ಕೆ ಸಹಕಾರ ಕೊಟ್ಟಿಲ್ಲ.. ಈ ವೇಳೆ ಬಾಲಕಿ ಕಿರುಚಿಕೊಳ್ಳಲು ಯತ್ನಿಸಿದ್ದಾಳೆ.. ಈ ವೇಳೆ ಆಕೆಯ ಕಿರುಚಾಟ ತಡೆಯಲು ಶಿಕ್ಷಕ, ಆಕೆಯ ಬಾಯಿ, ಮೂಗು ಮುಚ್ಚಿ ಹಿಡಿದಿದ್ದಾನೆ.. ಇದರಿಂದಾಗಿ ಉಸಿರಾಡಲು ಆಗದೇ ಬಾಲಕಿ ಸಾವನ್ನಪ್ಪಿದ್ದಾಳೆ..
ಶಾಲೆ ಮುಗಿಯುವರೆಗೂ ಬಾಲಕಿಯ ಮೃತದೇಹವನ್ನು ಕಾರಿನಲ್ಲೇ ಬಿಟ್ಟಿದ ಶಿಕ್ಷಕ, ಶಾಲೆ ಮುಗಿದ ಮೇಲೆ ಶಾಲಾ ಆವರಣದಲ್ಲಿ ಬಾಲಕಿಯ ಮೃತದೇಹವನ್ನು ಬಿಸಾಕಿದ್ದಾನೆ. ಆಕೆಯ ಬ್ಯಾಗ್ ಹಾಗು ಚಪ್ಪಲಿಯನ್ನು ತರಗತಿಯಲ್ಲೇ ಬಿಟ್ಟಿದ್ದಾನೆ.. ಪೊಲೀಸರು ವಿಚಾರಣೆ ನಡೆಸಿದಾಗ ನಾನು ಕಾರಿನಲ್ಲಿ ಕರೆದುಕೊಂಡು ಶಾಲೆಗೆ ಬಿಟ್ಟಿದ್ದೆ ಎಂದು ಹೇಳಿದ್ದಾರೆ.. ಆದ್ರೆ ಇತರೆ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕೇಳಿದಾಗ ಬಾಲಕಿ ಶಾಲೆಗೆ ಬಂದೇ ಇರಲಿಲ್ಲ ಎಂದು ಹೇಳಿದ್ದರು. ಹೀಗಾಗಿ ಪೊಲೀಸರು ಮುಖ್ಯಶಿಕ್ಷಕನನ್ನು ತೀವ್ರ ವಿಚಾರಣೆ ನಡೆಸಿದಾಗ ನಿಜ ವಿಷಯ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.