ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲೆಯ ಬಳಿ ವ್ಯಕ್ತಿಯೋರ್ವ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆಯುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿ ದ್ದಾರೆ. ಖಚಿತ ಮಾಹಿತಿ ಆದಾರದ ಮೇರೆಗೆ ನಾಪೋಕ್ಲು ಠಾಣಾ ಸರಹದ್ದಿನ ಹಳೇ ತಾಲ್ಲೂಕಿನ ಶಾಲಾ ಮೈದಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ಉಸ್ಮಾನ್ ಹಾಜಿಯವರ ಮಗ ಕೆ.ಯು. ಅಶ್ರಫ್ ಎಂಬ ವ್ಯಕ್ತಿಯನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪನವರ ನೇತೃತ್ವದಲ್ಲಿ ನಾಪೋಕ್ಲು ಠಾಣಾಧಿಕಾರಿಯವರ ತಂಡ ಬಂಧಿಸಿ ಆರೋಪಿತನಿಂದ 1 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ.
ತೂಕದ ಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕರ ಮತ್ತು ಮಡಿಕೇರಿ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾ ಪಿ.ಎಸ್.ಐ ಕಿರಣ್, ಎಎಸ್ಐ ಕುಶಾಲಪ್ಪ, ಸಿಬ್ಬಂದಿಗಳಾದ ಜ್ಯೋತಿ ಕುಮಾರ್, ಸಾಜನ್, ನವೀನ್, ಮಹೇಶ್, ಹರ್ಶ, ಮಹದೇವ ನಾಯಕ್, ರಾಜೇಶ್, ಗಿರೀಶ್, ಶಿವಪ್ರಸಾದ್, ಶರತ್, ಸಮೀಲ್ ಹಾಗು ಶರೀಫ್ ರವರು ಭಾಗಿಯಾಗಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್