16/05/2025 ರಂದು ಅಂರ್ತಜಾಲ ಮಾದ್ಯಮದಲ್ಲಿ ಕಾರ್ಕಳದ ವಿವಾಹಿತೆ ಹಿಂದು ಮಹಿಳೆ ಮತ್ತು ಮುಸ್ಲಿಂ ಯುವಕನ ಕುರಿತು ವ್ಯಂಗ್ಯವಾಗಿ ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ವಪಿರ್ಯಾದಿಯಂತೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 105/2025 ಕಲಂ 353(2), 56 BNS ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ತನಿಖೆಯಲ್ಲಿ ಮೆಟಾಡಾಟಾ ಮೂಲಕ ಇನ್ಸ್‌ಟಾಗ್ರಾಂ ನಲ್ಲಿ ಈ ಪೋಸ್ಟ್ ಮಾಡಿದ ಆರೋಪಿತರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿತರುಗಳಾದ ನಿತೇಶ್ ಕೆ ಪ್ರಾಯ: 20 ವರ್ಷ ತಂದೆ: ಬೆಳ್ಳಿಯಪ್ಪ ಗೌಡ, ಪುತ್ತೂರು ರಸ್ತೆ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಈತನನ್ನು ದಿನಾಂಕ: 30/01/2026 ರಂದು ಪುತ್ತೂರು ತಾಲೂಕಿನ ಕಲ್ಲಬ ಜಂಕ್ಷನ್ ಬಳಿಯಿಂದ ಹಾಗೂ ಹಿತೇಶ್ ಎ ಪ್ರಾಯ: 19 ವರ್ಷ ತಂದೆ: ಜಯಂತ ಗೌಡ, ಸಿರಿಬಾಗಿಲು ಗ್ರಾಮ ಗುಂಡ್ಯ ಅಂಚೆ, ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಈತನನ್ನು ದಿನಾಂಕ: 01/02/2026 ರಂದು ಮಂಗಳೂರು ಲಾಲ್ ಬಾಗ್ ಎಂಬಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದಸ್ತಗರಿ ಮಾಡಿ ಆರೋಪಿತುರಗಳ ಮೊಬೈಲ್ ಗಳನ್ನು ಸ್ವಾಧೀನಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






