ದಿನಾಂಕ: 24, 25/09/2024 ಎರಡೂ ದಿವಸ ಕಲಬುರಗಿಯಲ್ಲಿ ಜರುಗಿದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2024 ಕ್ಕೆ ಶ್ರೀ, ಶ್ರೀನಿವಾಸ ಅಲ್ಲಾಪೂರೆ, ಸಿ.ಪಿ.ಐ ಚಿಟಗುಪ್ಪಾ ವೃತ್ತ ರವರ ನೇತೃತ್ವದಲ್ಲಿ ಬೀದರ ಜಿಲ್ಲೆಯಿಂದ ಒಟ್ಟು 20 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಕೂಟದಲ್ಲಿ ಕಲಬುರಗಿ ನಗರ, ಕಲಬುರಗಿ ಜಿಲ್ಲೆ, ಯಾದಗಿರಿ ಜಿಲ್ಲೆ, ಬೀದರ ಜಿಲ್ಲೆಗಳಿಂದ ಪೊಲೀಸ್ ತಂಡಗಳು 1) Scientific aid and investigation, 2) Crime scene photography, 3) Finger print handling, 4) Handling lifting and packing, 5) Narcotics and bomb detection ಸ್ಪರ್ದೆಗಳಲ್ಲಿ ಭಾಗ ವಹಿಸಿದ್ದು, ಇದರಲ್ಲಿ Individual Championship ಆಗಿ ಶ್ರೀ, ರಘುವೀರಸಿಂಗ್ ಠಾಕೂರ, ಸಿ.ಪಿ.ಐ ಔರಾದ-ಬಿ ರವರು ಚಾಂಪಿಯನ್ ಟ್ರಾಫಿ ಪಡೆದುಕೊಂಡಿರುತ್ತಾರೆ. ಬೀದರ ಜಿಲ್ಲಾ ಪೊಲೀಸ್ ತಂಡವು ಒಟ್ಟು 8 ಬಂಗಾರ, 5 ಬೆಳ್ಳಿ, 5 ಕಂಚಿನ ಪದಕ. ಹೀಗೆ ಒಟ್ಟು 18 ಪದಕ ಹಾಗೂ 2 ಚಾಂಪಿಯನ್ ಟ್ರೋಫಿ ಗೆಲ್ಲುವದರ ಮೂಲಕ ಬೀದರ್ ತಂಡ ಪ್ರಥಮ ಸ್ಥಾನ ಗಳಿಸಿ ತಂಡವು ಸತತ ಎರಡನೇ ಸಲ ರಾಜ್ಯ ಮಟ್ಟದ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿರುತ್ತದೆ.
ಸ್ಪರ್ಧೆಯಲ್ಲಿ ಭಾಗ ವಹಿಸಿ ಪದಕ ವಿಜೇತರಾದ ಮತ್ತು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಕರ್ತವ್ಯ ಕೂಟಕ್ಕೆ ಆಯ್ಕೆಯಾಗಿ ಸಮಸ್ತ ಬೀದರ ಜಿಲ್ಲಾ ಪೊಲೀಸರ ಪ್ರಶಂಸೆಗೆ ಪಾತ್ರರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ತಂಡಕ್ಕೆ ಅಭಿನಂದನೆಗಳು.