11.50 ಕೋಟಿ ಮೌಲ್ಯದ 1 ಕೆ.ಜಿ 50 ಗ್ರಾಂ ಎಂ.ಡಿ.ಎಂ.ಎ ಕಿಸೆಲ್, 3 ಮೊಬೈಲ್ ಫೋನ್‌ಗಳ ವಶ.
ಸಿಸಿಬಿ ಯ ಮಾದಕ ದಮ್ಮ ನಿಗ್ರಹ ದಳದ ಅಧಿಕಾರಿಯವರು ದಿನಾಂಕ:24/07/2024 ರಂದು ಪ್ರಕರಣವೊಂದು ದಾಖಲಿಸಿ, ವಿದೇಶಿ ಆರೋಪಿಯೋರ್ವನನ್ನು ವಶಕ್ಕೆ ಪಡೆದು, ಆತನಿಂದ ನಿಷೇಧಿತ ಮಾದಕ ವಸ್ತುವಾದ 4 ಕೆ.ಜಿ ಎಂ.ಡಿ.ಎಂ.ಎ ಸೆಲ್‌ವನ್ನು ವಶಪಡಿಸಿಕೊಂಡಿರುತ್ತಾರೆ. ತನಿಖಾ ಕಾಲದಲ್ಲಿ ಈ ಆರೋಪಿಯು ಮತ್ತೊರ್ವ ವಿದೇಶಿ ಡಗ್ ಪೆಡರ್‌ನಿಂದ ನಿಷೇಧಿತ ಮಾದಕ ವಸ್ತುವನ್ನು ಖರೀದಿಸಿದ್ದಾಗಿ ತಿಳಿಸಿರುತ್ತಾನೆ ಹಾಗೂ ಡಗ್ ಪೆಡರ್‌ನ್ನ ಹೆಸರನ್ನು ಮಾತ್ರ ತಿಳಿಸಿರುತ್ತಾನೆ.
ಈ ಮಾಹಿತಿ ಆಧಾರದ ಮೇರೆಗೆ ಆ ವಿದೇಶಿ ಡಗ್ ಪೆಡರ್‌ನನ್ನು ಪತ್ತೆಮಾಡಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿಗಳು ವಿದೇಶಿ ಡಗ್ ಪೆಡರ್‌ನನ ಪತೆಮಾಡಿ, ತನಿಖಾಧಿಕಾರಿಯವರಿಗೆ ತಿಳಿಸಿದ ಮೇರೆಗೆ, ತನಿಖಾಧಿಕಾರಿಯವರು ಅವರ ಸಿಬ್ಬಂದಿಯೊಂದಿಗೆ ದಿನಾಂಕ:17/09/2024 ರಂದು ಆ ವಿದೇಶಿ ಡಗ್ ಪೆಡರ್ ವಾಸವಾಗಿದ್ದ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನ ಮನೆಯಲ್ಲಿ ದಾಳಿ ಮಾಡಿ, ಆ ಓರ್ವ ವಿದೇಶಿ ಡಗ್ ಪೆಡರ್ ಹಾಗೂ ಓರ್ವ ಮಹಿಳೆಯನ್ನು ವಶಕ್ಕೆ ಪಡೆಯಲಾಯಿತು.
ವಶಕ್ಕೆ ಪಡೆದ ಈ ಇಬ್ಬರು ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುವಾದ 1 ಕೆ.ಜಿ 50 ಗ್ರಾಂ ಎಂ.ಡಿ.ಎಂ.ಎ ಕ್ರಿಸೆಲ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 1,50,00,000/-(ಒಂದು ಕೋಟಿ ಐವತ್ತು ಲಕ್ಷ ರೂಪಾಯಿ).
ವಿದೇಶಿ ಆರೋಪಿಯ ವಿರುದ್ಧ 2018ರಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ
ಎನ್.ಡಿ.ಪಿ.ಎಸ್ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ:18/09/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಿಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.