02.09.2024 ರಂದು ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆ, ಪಟಾಲಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಆಟದ ಮೈದಾನದ ಕಾಂಪೌಂಡ್ ಪಕ್ಕದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಗ್‌ವೊಂದರಲ್ಲಿ ಗಾಂಜಾವನ್ನು ಇಟ್ಟುಕೊಂಡು, ಪ್ಯಾಕೆಟ್ ಕವರ್‌ನಲ್ಲಿ ಹಾಕಿ ಮಾರಾಟ ಮಾಡುತ್ತಿದ್ದಾನೆಂದು ಬಾತ್ಮಿದಾರರರಿಂದ ಖಚಿತ ಮಾಹಿತಿಯೊಂದು ಸುಬ್ರಮಣ್ಯಪುರ ಪೊಲೀಸರಿಗೆ ದೊರೆತ್ತಿರುತ್ತದೆ. ಈ ಮಾಹಿತಿಯನ್ನು ಆಧಾರಿಸಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಗಾಂಜಾ ಮಾರಾಟ ಮಾಡುತ್ತಿದ್ದ
ಸ್ಥಳದಲ್ಲಿ ದಾಳಿ ಮಾಡಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ವಶದಲ್ಲಿದ್ದ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಯಿತು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಬಿಹಾರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿ ಮಾಡಿ ಬೆಂಗಳೂರಿಗೆ ತಂದು ಬೆಂಗಳೂರಿನ ಉತ್ತರಹಳ್ಳಿ, ಕೆಂಗೇರಿ ಕಡೆಗಳಲ್ಲಿರುವ ಕಾಲೇಜ್ ಆಟದ ಮೈದಾನದ ಬಳಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆಯಲ್ಲಿ ತಿಳಿಸಿರುತ್ತಾನೆ. ಆರೋಪಿಯ ವಶದಿಂದ ಸುಮಾರು 1,25,000/- ಬೆಲೆಬಾಳುವ ಸುಮಾರು 3 ಕೆ.ಜಿ 790 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:03/09/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್‌ರವರಾದ ಶ್ರೀ ಲೋಕೇಶ್ ಭ ಜಗಲಾಸರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ-ವಿಭಾಗದ ಪ್ರಭಾರದಲ್ಲಿರುವ ಶ್ರೀ.ನಾರಾಯಣಸ್ವಾಮಿ.ವಿ ಸಹಾಯಕ ಪೊಲೀಸ್ ಆಯುಕ್ತರು, ಜಯನಗರ ಉಪ-ವಿಭಾಗ ರವರ ನೇತೃತ್ವದಲ್ಲಿ, ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರಾಜು ಎಂ.ಎಸ್ ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.