ದಿನಾಂಕ:09.08.2024 ರಂದು ಇಂದಿರಾನಗರ ಕದಿರಯ್ಯನಪಾಳ್ಯದ ನೀಲಗಿರಿತೋಪಿನ ಬಳಿ ಮರೆಯಲ್ಲಿ ಐವರು ವ್ಯಕ್ತಿಗಳು ಮಾರಕಾಸ್ತ್ರಗಳನ್ನು, ಖಾರದ ಪುಡಿ, ಚಾಕು ಇತ್ಯಾದಿ ಹಿಡಿದುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿಯು ಇಂದಿರಾನಗರ ಪೊಲೀಸ್‌ಠಾಣೆಯ ಅಧಿಕಾರಿ/ಸಿಬ್ಬಂದಿಯವರಿಗೆ ದೊರೆತ್ತಿರುತ್ತದೆ.
ಈ ಮಾಹಿತಿಯ ಆಧಾರದ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಮಾರಕಾಸ್ತ್ರ ಹೊಂದಿದ್ದ ಐವರು ವ್ಯಕ್ತಿಗಳನ್ನು ಸುತ್ತುವರೆದು ಹಿಡಿಯಲು ಪ್ರಯತ್ನಿಸಿದ್ದು, 3 ವ್ಯಕ್ತಿಗಳನ್ನು ಮಾರಕಾಸ್ತ್ರಗಳಾದ 2 ಚಾಕು ಇತರೆ ವಸ್ತುಗಳಾದ ಖಾರಾದ ಪುಡಿ, 2 ಮೊಬೈಲ್ ಫೋನ್ ಸಮೇತ ವಶಪಡಿಸಿಕೊಳ್ಳಲಾಗಿರುತ್ತದೆ. ಉಳಿದ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ವಶಪಡಿಸಿಕೊಂಡ ಮೂವರು ವ್ಯಕ್ತಿಗಳನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಅವರುಗಳು ತಮಿಳುನಾಡು ರಾಜ್ಯದ ತಿರುಚಿರಾಪಲ್ಲಿ ಜಿಲ್ಲೆ ಶ್ರೀರಂಗ ತಾಲ್ಲೋಕ್‌ರವರೆಂದು ತಿಳಿಸಿರುತ್ತಾರೆ. ಇವರುಗಳ ವಿರುದ್ಧ ಠಾಣೆಯಲ್ಲಿ ದರೋಡೆಗೆ ಪ್ರಯತ್ನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.
ವಶಪಡಿಸಿಕೊಂಡ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ಕಾರಿನ ಕಿಟಕಿಯ ಗಾಜನ್ನು ಹೊಡೆದು ಕಾರಿನಲ್ಲಿರುವ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿರುವ ಬಗ್ಗೆ ಹಾಗೂ ಕಳವು ಮಾಡಿರುವ ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುವ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.
ದಿನಾಂಕ:09/08/2024 ರಂದು ಈ ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಕಳವು ಮಾಡಿದ್ದ ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯು ವಾಸವಿದ್ದ ತಿರುವಂಬೂರು ತಾಲ್ಲೂಕು. ತಿರುಚಿರಾಪಲ್ಲಿ ಜಿಲ್ಲೆ ತಮಿಳುನಾಡು ರಾಜ್ಯಕ್ಕೆ ದಿನಾಂಕ:ll/08/2024 ರಂದು ಹೋಗಿದ್ದು, ದಿನಾಂಕ:13/08/2024 ರಂದು ಆತನಿಗೆ ಲಾಪ್‌ಟ್ಯಾಪ್‌ಗಳನ್ನು ಹಾಜರುಪಡಿಸುವಂತೆ ನೋಟಿಸ್‌ನ್ನು ಜಾರಿ ಮಾಡಿರುತ್ತದೆ.
ದಿನಾಂಕ:15/08/2024 ರಂದು ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುತ್ತಿದ್ದ ಆರೋಪಿಯನ್ನು ಅತ್ತಿಬೆಲೆ ಬಸ್‌ಸ್ಟಾಪ್‌ನ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ಅದೇ ದಿನ ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುತ್ತಿದ್ದ ಆರೋಪಿಯ ಅಣ್ಣನು 7 ಲ್ಯಾಪ್‌ಟಾಪ್‌ಗಳನ್ನು ಠಾಣೆಗೆ ತಂದು ಹಾಜರುಪಡಿಸಿರುತ್ತಾನೆ.
ದಿನಾಂಕ:17/08/2024 ರಂದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಹಾಗೂ ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಡಿ. ದೇವರಾಜ್ ಐ.ಪಿ.ಎಸ್. ಹಾಗೂ ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಟಿ.ರಂಗಪ್ಪ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಇಂದಿರಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಸುದರ್ಶನ್ ಹೆಚ್.ವಿ. ,ಸಬ್ ಇನ್ಸ್ಪೆಕ್ಟರ್ ಶ್ರೀ ವಿನೋದ್ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.