ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಕೊಲೆಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದವರ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಮಾನ. ನ್ಯಾಯಾಲಯವು ಈ ಪ್ರಕರಣದಲ್ಲಿ ವಿಚಾರಣೆ ನಡೆಸುತಿದು. ಪ್ರಕರಣದಲ್ಲಿನ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುತ್ತಾರೆ. ಈ ಪ್ರಕರಣದ ಓರ್ವ ಆರೋಪಿಯು ಮಾನ್ಯ ನ್ಯಾಯಾಲಯದ ವಿಚಾರಣೆ ದಿನಾಂಕಗಳಂದು ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾನೆ.
ಮಾನ ನ್ಯಾಯಾಲಯದಿಂದ ಆರೋಪಿಯ ವಿರುದ್ಧ 3 ಬಾರಿ ಸಮನ್ ಮತ್ತು 16 ಬಾರಿ ದಸಗಿರಿ ವಾರೆಂಟ್ ಅನ್ನು ಆದೇಶಿಸಿದ್ದರೂ ಸಹ, ಆರೋಪಿಯು ಕಳೆದ 04 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುತ್ತಾನೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡುವ ಸಲುವಾಗಿ ಒಂದು ತಂಡವನ್ನು ರಚಿಸಿದ್ದು, ಕಾರ್ಯಪ್ರವೃತ್ತರಾಗಿದ್ದ ತಂಡಕ್ಕೆ ಭಾತ್ಮೀದಾರರಿಂದ ಖಚಿತವಾದ ಮಾಹಿತಿಯೊಂದನ್ನು ಕಲೆ ಹಾಕಿ, ದಿನಾಂಕ:30-05-2024 ರಂದು ಆರೋಪಿಯನ್ನು ಮಂಡ್ಯ ಜಿಲ್ಲೆಯ ಹೊಸಳ್ಳಿ ಗ್ರಾಮದಿಂದ ವಶಕ್ಕೆ ಪಡೆದು ಠಾಣೆಗೆ ಕರೆತಂದು, ಮಾನ್ಯ ನ್ಯಾಯಲಯಕ್ಕೆ ಹಾಜರಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಬೆಂಗಳೂರು ನಗರ ದಕ್ಷಿಣ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೊಕೇಶ್ ಭರಮಪ್ಪ ಜಗಲಾಸ ರವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು, ಸುಬ್ರಮಣ್ಯಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಸುಬ್ರಮಣ್ಯಪುರ ಪೊಲೀಸ್ ಇನ್ಸ್‌ಪೆಕ ಹಾಗೂ ಅಧಿಕಾರಿ/ಸಿಬ್ಬಂದಿಗಳ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.