ಜೀವನ್ ಭೀಮಾ ನಗರ ಪೊಲೀಸ್ ಠಾಣಾ ಸರಹದ್ದಿನ ಅಮರ ಜ್ಯೋತಿ ಲೇಔಟ್, ಹೋಟೆಲ್‌ನಲ್ಲಿ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿಯೊಂದು ಪೊಲೀಸರಿಗೆ ದೊರೆತ್ತಿರುತ್ತದೆ. ಪೊಲೀಸರು ಓರ್ವ ಬಾತ್ಮೀದಾರರನ್ನು ಡಿಕಾಯಿಯನ್ನಾಗಿ ನೇಮಿಸಿಕೊಂಡು ದಂಧೆ ನಡೆಸುತ್ತಿದ್ದ ಆರೋಪಿಯೊಂದಿಗೆ ಫೋನ್ ಮುಖಾಂತರ ಸಂಪರ್ಕಿಸಿ ವ್ಯವಹಾರ ಕುದುರಿಸಿಕೊಂಡು ಆತನ ಸೂಚನೆಯಂತೆ ಹೋಟೆಲ್‌ಗೆ ಹೋಗಿ ಮಾತನಾಡಿದ್ದು, ಆತನು ಮತ್ತೋರ್ವನೊಂದಿಗೆ ಮಾತನಾಡಿ ಖಚಿತಪಡಿಸಿಕೊಂಡ ನಂತರ ಡಿಕಾಯಿಯಿಂದ 2,000/- ಪಡೆದುಕೊಂಡು ರೂಮ್‌ಗೆ ಕಳುಹಿಸಿ ಕೊಟ್ಟಿರುತ್ತಾನೆ.
ನಂತರ ಡಿಕಾಯಿಯು ಹೊರಗೆ ಬಾರದ ಕಾರಣ ಹೋಟೆಲ್ ಮೇಲೆ ದಾಳಿ ಮಾಡಿ, ಸ್ವಾಗತಕಾರರ ಕೌಂಟರ್‌ನಲ್ಲಿ ಕುಳಿತ್ತಿದ್ದ ಓರ್ವನನ್ನು ವಿಚಾರಣೆ ಮಾಡಲಾಗಿ, ಓರ್ವನು ಹುಡುಗಿಯರನ್ನು ಹೋಟೆಲ್‌ಗೆ ಕರೆತರುತ್ತಾನೆ. ನಂತರ ಗಿರಾಕಿಗಳನ್ನು ಕಳುಹಿಸಿ ದಂಧೆ ನಡೆಸುತ್ತಾನೆ ಎಂದು ತಿಳಿಸಿರುತ್ತಾನೆ. ನಂತರ ರೂಂ ಬಳಿ ಹೋಗಿ ಸಂತ್ರಸ್ತೆಯನ್ನು ರಕ್ಷಿಸಲಾಗಿರುತ್ತದೆ ಹಾಗೂ ಕೌಂಟರ್‌ನಲ್ಲಿ ಕುಳಿತ್ತಿದ್ದ ಓರ್ವ ಸ್ವಾಗತಕಾರ ಮತ್ತು ಮತ್ತೋರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ಈ ಸಂಬಂಧ ಜೆ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಹೆಚ್ಚಿನ ಹಣದ ಆಮಿಷವೊಡ್ಡಿ ಅಸಹಾಯಕ ಹೆಣ್ಣು ಮಕ್ಕಳಿಂದ ಬಲವಂತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿರುತ್ತದೆ. ನಂತರ ಅವರಿಗೆ ಪೊಲೀಸ್ ನೋಟಿಸ್ ನೀಡಲಾಗಿರುತ್ತದೆ.
ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾ ಆರ್. ಜೈನ್, ಐ.ಪಿ.ಎಸ್ ಮತ್ತು ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ರಂಗಪ್ಪ ಟಿ. ರವರ ಮಾರ್ಗದರ್ಶನದಲ್ಲಿ ಜೆ.ಬಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಯವರ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ.