- ಪುಲಿಕೇಶಿನಗರ ಪೊಲೀಸ್ ಠಾಣೆಯ ಪ್ರಕರಣ :-
ದಿನಾಂಕ:03//05/2024 ರಂದು ಬಾತ್ಮಿದಾರರಿಂದ ಖಚಿತ ಮಾಹಿತಿಯೊಂದು ಸಿಸಿಬಿ ಯ ಮಾದಕ ದಮ್ಮ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ದೊರೆತಿರುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ, ಓರ್ವ ಸ್ಥಳೀಯ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ವಶಕ್ಕೆ ಪಡೆದುಕೊಂಡ ಓರ್ವ ವ್ಯಕ್ತಿಯಿಂದ ಶೇ 1 ಲಕ್ಷ ಬೆಲೆಬಾಳುವ ವಿವಿಧ ಕಂಪನಿಯ 225 ಪ್ರಾಕ್ ವಿದೇಶಿ ಸಿಗರೇಟ್‌ಗಳು, 7 ವಿದೇಶಿ ಸಿಗರೇಟ್ ಬಾಕ್‌ಗಳು, 130 ಇ-ಸಿಗರೇಟ್. 110 ಇ-ಸಿಗರೇಟ್ ಪೇವರ್‌ಗಳು ನಗದು ಹಣ 1.400/- ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾಲೀಕರನನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೊಬ್ಬ ಕೆಲಸಗಾರ ಅರೋಪಿಯು ತಲೆ ಮರೆಸಿಕೊಂಡಿರುತ್ತಾನೆ. ಆತನ ಪತ್ತೆ ಕಾರ್ಯ ಮುಂದುವರೆದಿದೆ. ಈ ಆರೋಪಿಗಳ ವಿರುದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು, ತನಿಖೆ ಮುಂದುವರೆದಿದೆ
2.ಇಂದಿರಾನಗರ ಪೊಲೀಸ್ ಠಾಣೆಯ ಪ್ರಕರಣ :-
ದಿನಾಂಕ:14/05/2024 ರಂದು ಇಂದಿರಾನಗರ ಪೊಲೀಸ್ ಠಾಣಾ ಸರಹದಿನ, ಸಿ.ಎಂ.ಹೆಚ್ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ನಿಷೇಧಿತ ಇ-ಸಿಗರೇಟ್‌ನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಇಂದಿರಾನಗರ ಪೊಲೀಸರಿಗೆ ದೊರೆತಿರುತ್ತದೆ. ಈ ಮಾಹಿತಿ ಆಧಾರದ ಮೇರೆಗೆ ಇಂದಿರಾನಗರ ಪೊಲೀಸರು ದಾಳಿ ಮಾಡಿ ಅಂಗಡಿ ಮಾಲೀಕ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸೇರಿದಂತೆ ಒಟ್ಟು ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರುಗಳಿಂದ ಒಟ್ಟು 12.50.000/- (ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ ಮೌಲ್ಯದ ELFBAR ಕಂಪನಿಯ ನಿಷೇಧಿತ 250 ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು, ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್. ಆರ್. ಜೈನ್, ಐ.ಪಿ.ಎಸ್ ಹಾಗೂ ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ರಂಗಪ್ಪ ಟಿ. ರವರ ಮಾರ್ಗದರ್ಶನದಲ್ಲಿ ಇಂದಿರಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.