ಮೊಬೈಲ್ ಸುಲಿಗೆ ಮಾಡುತ್ತಿದ್ದ ಓರ್ವ ವ್ಯಕ್ತಿಯ ದ್ವಿ-ಚಕ್ರ ವಾಹನ ವಶ.
ಜಂಕ್ಷನ್ బళి ಪಿರಾದುದಾರರು ನಡೆದುಕೊಂಡು ಹೋಗುತ್ತಿರುವಾಗ, ಹಿಂದಿನಿಂದ ಸ್ಕೂಟರ್‌ವೊಂದರಲ್ಲಿ ಬಂದ ವ್ಯಕ್ತಿಯು ಪಿರಾದುದಾರರ ಕೈಯಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿರುತ್ತಾನೆ. ಈ ಕುರಿತು ಪಿರಾದುದಾರರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರನು ಸಲ್ಲಿಸಿರುತ್ತಾರೆ. ಗೋವಿಂದಪುರ ಪೊಲೀಸರು ಸುಲಿಗೆ ಪ್ರಕರಣವನ್ನು ದಾಖಲಿಸಿರುತ್ತಾರೆ.
ತನಿಖೆ ಕೈಗೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅಯಾಮಗಳಲ್ಲಿ ತನಿಖೆ ನಡೆಸಿ, ಬಾದಾರರಿಂದ ಮಾಹಿತಿಯನ್ನು ಪಡೆದು ನಂತರ ದಿನಾಂಕ:10.05.2024 ರಂದು ನಾಗವಾರ ಜಂಕನ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ. ಮೊಬೈಲ್ ಫೋನ್‌ವೊಂದನ್ನು ಸುಲಿಗೆ ಮಾಡಿರುವುದಾಗಿ ತಪ್ಪಿಪಿಕೊಂಡಿರುತ್ತಾನೆ.
ಸುದೀರ್ಘವಾಗಿ ತನಿಖೆ ಮುಂದುವರೆಸಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಂದು ಮೊಬೈಲ್ ಫೋನ್‌ನ್ನು ದಿನಾಂಕ:19.04.2024 ರಂದು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಎರಡು ಮೊಬೈಲ್‌ಗಳನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿರುವುದಾಗಿ ತಿಳಿಸಿ 2 ಮೊಬೈಲ್ ಫೋನ್‌ಗಳನ್ನು ಹಾಜರಡಿಸಿರುತ್ತಾನೆ. ಆತನ್ನು ನೀಡಿದ ಮಾಹಿತಿ ಮೇರೆಗೆ ಸುಮಾರು 7 75,000/- ಬೆಲೆ ಬಾಳುವ 2 ಮೊಬೈಲ್ ಫೋನ್ ಹಾಗೂ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ದಿನಾಂಕ:11.05.2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾರಜರಡಿಸಿರುತ್ತಾರೆ.
ಈ ಕಾರ್ಯಚರಣೆಯನು, ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಕುಲದೀಪ್ ಕುಮಾರ್ ಆರ್. ಜೈನ್, ಐ.ಪಿ.ಎಸ್ ಹಾಗೂ ಕೆ.ಜಿ.ಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಪ್ರಕಾಶ ರಾಠೋಡ ರವರ ಮಾರ್ಗದರ್ಶನದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕ ಶ್ರೀ.ಜಯರಾಜ್.ಹೆಚ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.