ಬಸವನಗುಡಿ ಪೊಲೀಸ್ ಠಾಣೆಯ ಕಿಡ್ತಾ ಪ್-ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ವ್ಯಕ್ತಿಯು ಸುಮಾರು-09 ವರ್ಷಗಳಿಂದ.. ಮಾನ. ನಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಈ ಪ್ರಕರಣವನ್ನು ಎಲ್.ಪಿ.ಆರ್ ಪ್ರಕರಣವೆಂದು ಪರಿಗಣಿಸಲಾಗಿತ್ತು.
ಈ ಕುರಿತು ಅರೋಪಿಯ ಪತೆಗಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಒಂದು
ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ದಿನಾಂಕ:01-05-2024 ರಂದು ಕೆ.ಆರ್.ಪುರಂ ಹತ್ತಿರವಿರುವ ಅವಲಹಳ್ಳಿಯಲ್ಲಿ ಆತನನ್ನು ವಶಕ್ಕೆ ಪಡೆದು, ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಲಾಯಿತು.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ ಜಗಲಾಸ, ಐ.ಪಿ.ಎಸ್ ರವರ ನಿರ್ದೇಶನದಂತೆ ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ ವಿ ರವರ ಮಾರ್ಗದರ್ಶನದಲ್ಲಿ
ಬಸವನಗುಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಸವಿತ ರವರ ನೇತೃತ್ವದಲ್ಲಿ
ಅಧಿಕಾರಿ/ಸಿಬ್ಬಂದಿಗಳು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.