ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಡಿಯಲ್ ಹೋಮ್ಸ್ ನಿವಾಸಿಯಾದ ಪಿರಾದುದಾರರು, ದಿನಾಂಕ:15/04/2024 ರಂದು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಮಗ ಹಾಗೂ ಆತನ ಸ್ನೇಹಿತರಿಬ್ಬರು ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಅಪ್ರಾಪ್ತ ವಯಸ್ಸಿನವರಾಗಿರುತ್ತಾರೆ. ಪಿರಾದುದಾರರ ಮಗ ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ಬಿಜಿಎಂಐ, ಪಬ್‌ಜೀ ಮತ್ತು ಡೀಮ್-11 ಗೇಮ್‌ಗಳನ್ನು ಆಟವಾಡುತ್ತಿದ್ದ ಬಗ್ಗೆ ಆತನ ತಂದೆ-ತಾಯಿ ಯವರಿಗೆ ತಿಳಿಸುವುದಾಗಿ ಸ್ನೇಹಿತರಿಬ್ಬರು ಬೆದರಿಸಿರುತ್ತಾರೆ ಹಾಗೂ ಸುಮ್ಮನ್ನಿರಲು ಹಣ ನೀಡಬೇಕೆಂದು ಕೇಳಿರುತ್ತಾರೆ. ಪಿರಾದಿಯ ಮಗ ತನ್ನ ಬಳಿ ಹಣವಿಲ್ಲವೆಂದು ತಿಳಿಸಿದಾಗ ಸ್ನೇಹಿತರಿಬ್ಬರು, ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ತಂದು ಕೊಡುವಂತೆ ತಿಳಿಸಿದರು.
ಪಿರಾದಿಯ ಮಗನು ಹೆದರಿ ಮನೆಯಲ್ಲಿದ್ದ ಸುಮಾರು 600-700 ಗ್ರಾಂ ಚಿನ್ನದ ಆಭರಣಗಳನ್ನು ತಂದು ಸ್ನೇಹಿತರಿಬ್ಬರಿಗೆ ನೀಡಿರುತ್ತಾನೆಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿ, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿಂದ ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿಯಲ್ಲಿ ಪಿರಾದಿಯ ಮಗನು ಆತನ ಸ್ನೇಹಿತರಿಬ್ಬರಿಗೂ ಚಿನ್ನದ ಆಭರಣಗಳನ್ನು ತಂದು ಒಪ್ಪಿಸಿದನ್ನು ಸ್ನೇಹಿತರಿಬ್ಬರು ಒಪ್ಪಿಕೊಂಡಿರುತ್ತಾರೆ. ಆ ಚಿನ್ನದ ವಡವೆಗಳನ್ನು ಅವರಿಗೆ ಪರಿಚಯವಿರುವ ನಾಲ್ಕು ಜನರಿಗೆ ನೀಡಿದ್ದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ದಿನಾಂಕ:18/04/2024 ರಂದು ಸಿಬಿಎಸ್
ಗಂಗಾವತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಅದೇ ಪ್ರಕಾರ ದಿನಾಂಕ:19/04/2024ರಂದು ಮತ್ತಿಬ್ಬರು ವ್ಯಕ್ತಿಗಳನ್ನು ಕ್ರಮವಾಗಿ ರಾಜರಾಜೇಶ್ವರಿನಗರ ಮತ್ತು ಕೆಂಗೇರಿಯಲ್ಲಿ ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿ ಹತ್ತು ದಿನಗಳ ಕಾಲ ಪೊಲೀಸ್ ಅಭಿರಕ್ಷಣೆ ಪಡೆಯಲಾಯಿತು.
ತನಿಖೆಯನ್ನು ಮುಂದುವರೆಸಿ, ನಾಲ್ಕು ಜನ ಆರೋಪಿಗಳ ಪೈಕಿ, ಇಬ್ಬರ ಬಳಿಯಿದ್ದ ಚಿನ್ನದ ವಡವೆಗಳನ್ನು ಕರಗಿಸಿದ್ದ 302 ಗ್ರಾಂ ತೂಕದ 2 ಚಿನ್ನದ ಗಟ್ಟಿ ಹಾಗೂ ಮತ್ತಿಬ್ಬರಿಂದ ಚಿನ್ನವನ್ನು ಮಾರಾಟ ಮಾಡಿ ಗಳಿಸಿದ್ದ ನಗದು ಹಣ 23,50,000/- (ಇಪ್ಪತ್ತ ಮೂರು ಲಕ್ಷದ ಐವತ್ತು ಸಾವಿರ ರೂಪಾಯಿ)ವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 341,50,000 (ನಲವತ್ತೊಂದು ಲಕ್ಷದ ಐವತ್ತು ಸಾವಿರ
ರೂಪಾಯಿ).
ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ. ಗಿರೀಶ್ ಎಸ್ ಹಾಗೂ ಬ್ಯಾಟರಾಯನಪುರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭರತ್.ಎಸ್.ರೆಡ್ಡಿ ಕೆ.ಎಸ್.ಪಿ.ಎಸ್. ರವರುಗಳ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಯಶಸ್ವಿಯಾಗಿರುತ್ತಾರೆ.