ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ!
1 ಕೋಟಿ 45 ಲಕ್ಷ ಮೌಲ್ಯದ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದವರಿಂದ ವಶ.
ಬೆಂಗಳೂರು ನಗರದಲ್ಲಿರುವ ಪೊಲೀಸ್ ಠಾಣೆಗಳಾದ ಚಾಮರಾಜ ಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಪೊಲೀಸ್ ಠಾಣ ಸರಹದ್ದುಗಳಲ್ಲಿ ಸರ್ಕಾರದಿಂದ ನಿಷೇದಿಸಲ್ಪಟ್ಟ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಹೊಂದದೇ ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇದರಲ್ಲಿ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ವಿವಿಧ ಉತ್ಪನ್ನಗಳಾದ ಅಪ್ಪಲ್ ಎಂಬ ಹೆಸರಿನ ಮೊಲಾಸಿಸ್ (ಹುಕ್ಕಾ ಬಾರ್‌ಗೆ ಬಳಸುವ ಉತ್ಪನ್ನ) ಮತ್ತು ತಂಬಾಕು ಉತ್ಪನ್ನ ಇರುವಂತಹ ದಿಲ್‌ಬಾಗ್, ಜೆಡ್ ಎಲ್-01, ACTION-7, ಬಾದ್‌ಷಾ, ಮಹಾ ರಾಯಲ್-717 ಹಾಗೂ ಇನ್ನಿತರೆ ಉತ್ಪನ್ನಗಳನ್ನು ಸಾರ್ವಜನಿಕರಿಗೆ/ವ್ಯಾಪಾರಸ್ತರಿಗೆ ಮಾರಾಟ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಕುರಿತು ಖಚಿತ ಮಾಹಿತಿ ದೊರೆತಿದ್ದ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ:09/02/2024 ರಂದು ಮೇಲೆ ತಿಳಿಸಿದ ಮೂರು ಸರಹದ್ದಿನಲ್ಲಿ ದಾಳಿ ನಡೆಸಿ, ಒಟ್ಟು 9 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿ ಸಮಯದಲ್ಲಿ ಸುಮಾರು 1 ಕೋಟಿ 45 ಲಕ್ಷ ಮೌಲ್ಯದ ತಂಬಾಕು/ನಿಕೋಟಿನ್ ಉತ್ಪನ್ನಗಳು, 11 ಮೊಬೈಲ್ ಫೋನ್‌ಗಳು, ನಗದು ಹಣ 1,10,260/- (ಒಂದು ಲಕ್ಷದ ಹತ್ತು ಸಾವಿರದ ಇನ್ನೂರ ಆರವತ್ತು ರೂಪಾಯಿ) ಹಾಗೂ ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತೆ. ತನಿಖೆ ಮುಂದುವರೆದಿರುತ್ತೆ.
ಈ ಕಾರ್ಯಚರಣೆಯನ್ನು ಅಪರ ಪೊಲೀಸ್ ಆಯುಕ್ತರಾದ (ಅಪರಾಧ) ಡಾ.ಚಂದ್ರಗುಪ್ತ, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಶ್ರೀ.ಅಬ್ದುಲ್ ಅಹದ್, ಐಪಿಎಸ್ (ಅಪರಾಧ) ರವರ ನಿರ್ದೇಶನದಂತೆ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.