ಒಂಟಿ ಮಹಿಳೆ ಮತ್ತು ಪುರಷರನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ವ್ಯಕ್ತಿಗಳಿಂದ { 6.5 ಲಕ್ಷ ಮೌಲ್ಯದ ಸುಮಾರು 113 ಗ್ರಾಂ ಚಿನ್ನಾಭರಣಗಳ ವಶ.

ಬೆಂಗಳೂರು ನಗರದ ಪಶ್ಚಿಮ ವಿಭಾಗದ, ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮನೆಯೊಂದರಲ್ಲಿ ಮನೆಯ ಕೆಲಸದಾಕೆಯು ಮನೆಯ ಮುಂದೆ ನೀರನ್ನು ಹಾಕುವ ಸಮಯದಲ್ಲಿ, ಅಪರಿಚಿತ ವ್ಯಕ್ತಿ ಕೈನಿಂದ ಹಲ್ಲೆಯನ್ನು ಮಾಡಿ, ಮಾಂಗಲ್ಯ ಸರವನ್ನು ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುತ್ತಾನೆ. ಈ ಕುರಿತು ದಿ: 10.11.2023 ರಂದು ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಬಸವೇಶ್ವರನಗರ ಪೊಲೀಸರು ಮೂರು ವ್ಯಕ್ತಿಗಳನ್ನು ದಿನಾಂಕ: 26/01/2024 ವಶಕ್ಕೆ ಪಡೆದುಕೊಂಡಿರುತ್ತಾರೆ. ಸುಧೀರ್ಘವಾಗಿ ವಿಚಾರಣೆ ನಡೆಸಿ ಮೂರು ಜನ ವ್ಯಕ್ತಿಗಳಿಂದ ಸುಮಾರು 113 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಗಿರೀಶ್‌ ರವರ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಎಸಿಪಿ ಶ್ರೀಯುತ ಚಂದನ್ ಕುಮಾರ್. ಕೆ.ಎಸ್.ಪಿ.ಎಸ್. ರವರ ನೇತೃತ್ವದಲ್ಲಿ, ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ಶ್ರೀ ಚಿಕ್ಕಸ್ವಾಮಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *