ಮನೆ ಕೆಲಸದಾಕೆಯಿಂದ ಮಾಲೀಕನ ಮನೆಯಲ್ಲಿಯೇ ಕಳ್ಳತನ, 130 ಲಕ್ಷ ಮೌಲ್ಯದ 523 ಗ್ರಾಂ ಚಿನ್ನದ ವಡವೆಗಳ ವಶ.

ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮನೆ ಮಾಲೀಕರು ವಿದೇಶಕ್ಕೆ ತೆರಳಿದ್ದು, ಮನೆಯಲ್ಲಿ ಮನೆ ಮಾಲೀಕರ ಇಬ್ಬರು ಮಕ್ಕಳು ಹಾಗೂ ಮನೆಯ ಕೆಲಸದಾಕೆಯು ವಾಸವಿರುತ್ತಾರೆ. ಮನೆಯ ಕೆಲಸದಾಕೆಯು ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಟೇಬಲ್‌ಗಳನ್ನು ಕಟ್ ಮಾಡಿರುತ್ತಾಳೆ. ನಂತರ ಮರುದಿನ ದಿನಾಂಕ: 25/01/2024ರ ಮಧ್ಯರಾತ್ರಿ ಸಮಯದಲ್ಲಿ ಕೆಲಸದಾಕೆಯೂ ನಾಟಕವಾಡಿ ಯುರೋ ಅಪರಿಚಿತರು ಮನೆಯ ರೂಂನಿಂದ ಚಿನ್ನದ ವಡವೆಗಳನ್ನು ಒಂದು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತೀರುವಾಗ ಆಕೆಯೂ ಎಚ್ಚರಗೊಂಡು ಅಪರಿಚಿತರನ್ನು ಹಿಡಿಯಲು ಪಯತ್ನಿಸಿದ್ದು, ಅಪರಿಚಿತರು ಅದೆ ಬ್ಯಾಗ್‌ನಿಂದ ಕೆಲಸದಾಕೆಗೆ ಹೊಡೆದು ಹೋಗಿರುತ್ತಾರೆಂದು ಮನೆಯಲ್ಲಿದ್ದ ಮಾಲೀಕರ ಮಕ್ಕಳಿಗೆ ತಿಳಿಸಿ ಅವರುಗಳಿಗೆ ನಂಬಿಸಿರುತ್ತಾಳೆ. ಮಾರನೆಯ ದಿನ ಮನೆಯ ಮಾಲೀಕರ ಮಗನು ಮನೆಯ ಕೆಲಸದಾಕೆಯು ತಿಳಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ರಾತ್ರಿ ಕಳವು ಪಕರಣ ದಾಖಲು ಮಾಡಿರುತ್ತಾರೆ.


ಪ್ರಕರಣ ದಾಖಲಿಸಿಕೊಂಡ ಸದಾಶಿವನಗರ ಪೊಲೀಸ್ ಠಾಣೆಯವರು ತನಿಖೆ ಕೈಗೊಂಡು ಕೆಲಸದಾಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಮನೆಯ ಕೆಲಸದಾಕೆಯು ದಿನಾಂಕ:-25/01/2024 ರಂದು ಅಂದರೆ ಒಂದು
ವಾರದ ಹಿಂದೆಯೇ ರೂಮ್‌ನ ಬೀಗವನ್ನು ತೆರೆದು ಕಬೋರ್ಡ್‌ನ ಬೀಗವನ್ನು ಹೊಡೆದು ಕರ್ಬೋಡ್ ಮತ್ತು ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ತಾನೇ ಕಳ್ಳತನ ಮಾಡಿರುವುದಾಗಿ ತನಿಖಾಧಿಕಾರಿಗಳ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾಳೆ. ನಂತರ ತನಿಖಾಧಿಕಾರಿಯವರು ಆಕೆಯ ವರದಿಂದ ಸುಮಾರು 30 ಲಕ್ಷ ಬೆಲೆಬಾಳುವ 523 ಗ್ರಾಂ ಚಿನ್ನದ ವಿವಿಧ ಮಾದರಿಯ ವಡವೆಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಈ ಕಾರ್ಯವನ್ನು ಬೆಂಗಳೂರು ನಗರ ಕೇಂದ್ರ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಶೇಖರ್ ಹೆಚ್ ಟೆಕ್ಚಣ್ಣನವರ್, ಐ.ಪಿ.ಎಸ್. ಹಾಗೂ ಶೇಷಾದ್ರಿಪುರಂ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪ್ರಕಾಶ್.ಆರ್ ರವರ ಮಾರ್ಗದರ್ಶನದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ ಸಿಬ್ಬಂದಿಯವರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *