ಪಿರಾದುದಾರರ ಮಗಳಿಗೆ ಬಿ.ಬಿ.ಎ. ಪದವಿ ವ್ಯಾಸಂಗಕ್ಕೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ 4 ಲಕ್ಷಕ್ಕೆ ಪ್ರವೇಶಾತಿ ಕೊಡಿಸುವುದಾಗಿ ಅವರ ಸ್ನೇಹಿತನೊಬ್ಬ ತಿಳಿಸಿರುತ್ತಾನೆ. ನಂತರ ಆತನ ಕಡೆಯಿಂದ ಪ್ರವೇಶಾತಿ ದೊರೆಯದ ಕಾರಣ ಮತ್ತೊಬ್ಬರ ಮುಖಾಂತರ ಮಗಳಿಗೆ ಪ್ರವೇಶಾತಿಯನ್ನು ಮಾಡಿಸಿಕೊಂಡಿರುತ್ತಾರೆ. ಆದರೆ ಪಿರಾದಿಯ ಸ್ನೇಹಿತ ಆ ಪ್ರವೇಶಾತಿಯನ್ನು ತಾನೇ ಮಾಡಿಸಿರುವುದು, ಈ ಹಿಂದೆ ಮಾತನಾಡಿರುವಂತೆ ನಮಗೆ ಹಣವನ್ನು ಕೊಡಬೇಕೆಂದು ಫೋನ್ ಮೂಲಕ ಬೆದರಿಕೆ ಹಾಕುತ್ತಿದ್ದನು.
ದಿನಾಂಕ 05-01-2024 ರಂದು ಮಧ್ಯಾಹ್ನದ ಸಮಯದಲ್ಲಿ ಪಿರಾದಿಯು ಮನೆಯಿಂದ ಪೀಣ್ಯದಲ್ಲಿರುವ ಅವರ ಪ್ಯಾಕ್ಟರಿಗೆ ಕಾರಿನಲ್ಲಿ ಹೋಗುತ್ತಿರುವಾಗ ರಾಜಾಜಿನಗರ ಠಾಣಾ ವ್ಯಾಪ್ತಿಯ ಡಾ: ರಾಜಕುಮಾರ್ ರಸ್ತೆಯಲ್ಲಿ, ಪಿರಾದಿಯ ಸ್ನೇಹಿತನು ಆತನ ಸಹಚರರೊಂದಿಗೆ ಪಿರಾದಿಯ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿ, ಕಾರಿನ ಸಮೇತ ಪಿರಾದಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ನಂತರ ಸ್ವಲ್ಪ ಸಮಯ ಸುತ್ತಾಡಿಸಿ, ಕೆ 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಪಿರಾದಿಯ ಕಡೆಯಿಂದ ಆತನ ಪತ್ನಿಗೆ ಮೊಬೈಲ್ ಮುಖಾಂತರ ಸಂಪರ್ಕಿಸಿ, ಆಕೆಯ ಕಡೆಯಿಂದ ಕೆ 7 ಲಕ್ಷ ಹಣವನ್ನು ಪಡೆದುಕೊಂಡ ನಂತರ ಪಿರಾದಿಯನ್ನು ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಈ ಕುರಿತು ಪಿರಾದಿಯು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ, ರಾಜಾಜಿನಗರ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ಅವರಿಂದ 17 ಲಕ್ಷ ನಗದು ಹಣ, ಕೃತ್ಯಕ್ಕೆ ಬಳಿಸಿದ ಒಂದು ಆಟೋ ರಿಕ್ಷಾ, 2-ಮೊಬೈಲ್ ಫೋನ್, 1-ಚಾಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಇನ್ನು ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ
ಮುಂದುವರೆದಿದೆ.
ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಪ್ರಮೋದ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್, ರಾಜಾಜಿನಗರ ಪೊಲೀಸ್ ಠಾಣೆ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.