ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೆ.ಜಿ ರಸ್ತೆಯ ಮೈಸೂರು ಬ್ಯಾಂಕ್ ಜಂಕ್ಷನ್‌ನಲ್ಲಿ ದಿನಾಂಕ:14.03.2016 ರಂದು ರಾತ್ರಿ ಸುಮಾರು 07.30 ಗಂಟೆ ಸಮಯದಲ್ಲಿ ಮೋಟಾರು ಸೈಕಲ್ ನೊಂದಣಿ ಸಂಖ್ಯೆ: ಕೆಎ-07-ಯು-8797 ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಪಾದಚಾರಿಣಿ ಶ್ರೀಮತಿ. ಭಾವನ ಎಂ ರಾಜ್ ಪಾಲ್, 60 ವರ್ಷರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರ ಎರಡು ಕಾಲುಗಳಿಗೆ ತೀವ್ರ ತರವಾದ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ. ಅಪಘಾತ ಪಡಿಸಿದ ನಂತರ ಮೋಟಾರು ಸೈಕಲ್ ಸವಾರನು ಗಾಯಾಳುವಿಗೆ ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸದೆ ಮತ್ತು ಅಪಘಾತದ ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ವಾಹನ ಸಮೇತ ಪರಾರಿಯಾಗಿರುತ್ತಾನೆ
ಪ್ರಕರಣ ದಾಖಲಿಸಿಕೊಂಡ
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿ, ಅಪಘಾತ ಸಮಯದಲ್ಲಿ ಆರೋಪಿಯ ವಾಹನಕ್ಕೆ ವಿಮೆ ಇಲ್ಲದಿರುವುದು ತನಿಖೆಯಿಂದ ಧೃಡಪಟ್ಟಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಪೂರೈಸಿ ಮಾನ್ಯ 2ನೇ ಎಂ.ಎಂ.ಟಿ.ಸಿ ಸಂಚಾರ ನ್ಯಾಯಾಲಯ ನೃಪತುಂಗ ರಸ್ತೆ ಬೆಂಗಳೂರು ನಗರರವರ ಸನ್ನಿಧಾನಕ್ಕೆ ಅಂತಿಮ ವರದಿಯನ್ನು ಸಲ್ಲಿಸಿ, ಅದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ಮೋಟಾರು ಸೈಕಲ್ ನೊಂದಣಿ ಸಂಖ್ಯೆ: ಕೆಎ-07-ಯು- 8797 ರ ಸವಾರನಾದ ಜಗದೀಶ್, 26 ವರ್ಷ ಈತನು “ದೋಷಿ” ಎಂದು ಸಾಬೀತಾಗಿರುತ್ತದೆ. ಮಾನ್ಯ ಘನ ನ್ಯಾಯಾಲಯವು ಆರೋಪಿತನಿಗೆ 6 ತಿಂಗಳ ಕಾಲ ಕಾರಾಗೃಹ ವಾಸ ಹಾಗೂ 7 1000/- ರೂಪಾಯಿ ಜುಲ್ಮಾನೆ ದಂಡವನ್ನು ವಿಧಿಸಿದ ಅದೇಶವನ್ನು ಹೊರಡಿಸಿರುತ್ತದೆ.