ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಲೀಗಲ್ ಹೆಡ್ ರವರು ಸೈಬರ್ ಕೈಂ ಠಾಣೆಗೆ ದೂರನ್ನು ನೀಡಿರುತ್ತಾರೆ. ದೂರಿನಲ್ಲಿ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯು, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾನೆ. ಈತನು ಹುಡುಗಿಯ ಜೊತೆ ಏಕಾಂತದ ಸಮಯದಲ್ಲಿ ಕೆಲವು ವ್ಯಯಕ್ತಿಕ ಪೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುತ್ತಾನೆ. ವಿಷಯ ತಿಳಿದ ಹುಡುಗಿಯು ಆತನ ಮೊಬೈಲ್‌ನಿಂದ ತನ್ನ ಪೋಟೊಗಳನ್ನು ಡಿಲೀಟ್ ಮಾಡುವ ಸಲುವಾಗಿ ಆತನ ಮೊಬೈಲ್ ಅನ್ನು ಪರಿಶೀಲಿಸಿರುತ್ತಾಳೆ. ಆದರೆ ಆತನ ಮೊಬೈಲ್‌ನಲ್ಲಿ ಅದೇ ರೀತಿಯ ಹಲವು ಹುಡುಗಿಯರ ಸುಮಾರು 12,000 ಪೋಟೋಗಳಿರುವುದನ್ನು ಗಮನಿಸಿರುತ್ತಾಳೆ. ನಂತರ ಸದರಿ ವಿಷಯವನ್ನು ಕಂಪನಿಯ ಲೀಗಲ್ ಹೆಡ್‌ರವರ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುವಂತೆ ಕೋರಿಕೊಂಡಿರುತ್ತಾಳೆ. ಅದರಂತೆ ಪಿರ್ಯಾದಿಯವರು ದೂರನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಯವರು ಒಂದು ತಂಡವನ್ನು ರಚಿಸಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಯ ಮೊಬೈಲ್‌ನಲ್ಲಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 11 ಸಹೋದ್ಯೋಗಿ ಹುಡುಗಿಯರ ಪೋಟೋಗಳನ್ನು ಸಹ ಮಾರ್ಫ್ ಮಾಡಿಸಿ ಇಟ್ಟುಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.
ಅರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿಯು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಂ, ಸ್ನಾಪ್ ಚಾಟ್ ನಿಂದ ಹಲವು ಹುಡುಗಿಯರನ್ನು ಪರಿಚಯಮಾಡಿಕೊಂಡು, ಅವರ ಡಿಪಿ ಮತ್ತು ಇತರೆ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು, ಟೆಲಿಗ್ರಾಂನಲ್ಲಿರುವ ಒಂದು ಆ್ಯಪ್ ಮುಖಾಂತರ, ಸೆರೆ ಹಿಡಿದಿರುವ ಹುಡುಗಿಯರ ಪೋಟೋಗಳನ್ನು ಕಳುಹಿಸುತ್ತಾನೆ. ಅದೇ ಆ್ಯಪ್ ಮುಖಾಂತರ ಹುಡುಗಿಯರ ಮಾರ್ಫ್ ಮಾಡಿರುವ ಚಿತ್ರಗಳು ಆತನ ಮೊಬೈಲ್‌ನಲ್ಲಿ ಶೇಖರಣೆಗೊಳ್ಳುತ್ತದೆ. ಮುಂದೆ ಈತನು ಹುಡುಗಿಯರ ಮಾರ್ಟಡ್ ಪೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಅಥವಾ ಹಣದ ಬೇಡಿಕೆಯನ್ನು ಮಾಡುವವನಾಗಿದ್ದು, ಆತನ ಬಂಧನದಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿರುತ್ತಾರೆ.