ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಪುರಾತನ ಚಿನ್ನಾಭರಣಗಳನ್ನು, ಕಳ್ಳತನ ಮಾಡಿದ್ದ ಇಬ್ಬರು ಆಸಾಮಿಗಳ ಬಂಧನ, 1 ಕೋಟಿ 2 ಲಕ್ಷ ಬೆಲೆ ಬಾಳುವ 1 ಕೆ.ಜಿ. 624 ಗ್ರಾಂ ಚಿನ್ನಮತ್ತು 6 ಕೆ.ಜಿ. 455 ಗಾಂ ಬೆಳ್ಳಿ ಹಾಗೂ 15 ಲಕ್ಷ, 50 ಸಾವಿರ ನಗದು ವಶ.

ದಿನಾಂಕ; 29-10-2023 ರಂದು ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದು ಕಾಂಚನಾ ಜುವೆಲ‌ ನಗರತಪೇಟೆ, ಬೆಂಗಳೂರು ರಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದವರಾದ ಮೂರು ಜನರು ಸೇರಿ ಪ್ಲಾನ್ ಮಾಡಿ ಅಂಗಡಿಯಲ್ಲಿದ್ದ ಪುರಾತನ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದು, ಈ ಸಂಬಂಧವಾಗಿ ಅಂಗಡಿಯ ಮಾಲೀಕರಾದ ಶ್ರೀ ಅರವಿಂದ್ ಕುಮಾರ್‌ ತಾಡೆ ಇವರು ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತೆ.ತನಿಖಾ ಕಾಲದಲ್ಲಿ ಪ್ರಕರಣದ ಆರೋಪಿತ ಆಸಾಮಿಗಳಾದ ಇಬ್ಬರನ್ನು ವಶಕ್ಕೆ ಪಡೆದು 1 1 ಕೋಟಿ 2 ಲಕ್ಷ ಬೆಲೆ ಬಾಳುವ 1 ಕೆ.ಜಿ. 624 ಗ್ರಾಂ ಚಿನ್ನ ಮತ್ತು 6 ಕೆ.ಜಿ. 455 ಗ್ರಾಂ ಬೆಳ್ಳಿ, ಕ 5 ಲಕ್ಷದ 50 ಸಾವಿರ ನಗದು ಹಣ, ಹಳೆಯ ನೋಟುಗಳು, ಕೈ ಗಡಿಯಾರಗಳು ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತೆ, ಹಲಸೂರುಗೇಟ್ ಪೊಲೀಸ್ ಠಾಣೆಯ ಒಂದು ಪ್ರಕರಣ ಮತ್ತು ಅನ್ನಪೂರ್ಣೇಶ್ವರಿನಗರ ಠಾಣೆಯ ಒಂದು ಪ್ರಕರಣ ಪತ್ತೆ ಮಾಡಲಾಗಿರುತ್ತೆ. ಮತ್ತೊಬ್ಬ ಆಸಾಮಿಯು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ.

ವಶಕ್ಕೆ ಪಡೆದಿರುವ ಒಬ್ಬ ವ್ಯಕ್ತಿಯ ವಿರುದ್ಧ ಸಿಟಿ ಮಾರ್ಕೆಟ್, ಅಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆ, ಮನೆ ಕಳುವು, ಹಗಲು ಕನ್ನ ಕಳುವು ಪ್ರಕರಣಗಳು ದಾಖಲಾಗಿದ್ದು ಆಸಾಮಿಯು ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದಿರುತ್ತಾನೆ.

ಈ ಯಶಸ್ವಿ ಕಾರ್ಯಚರಣೆಯನ್ನು ಶ್ರೀ ಶೇಖರ್ ಹೆಚ್.ಟಿ., ಐ.ಪಿ.ಎಸ್., ಮಾನ್ಯ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ ಮತ್ತು ಶ್ರೀ ಶಿವಾನಂದ ಛಲವಾದಿ, ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಹಲಸೂರುಗೇಟ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಶ್ರೀ ಹನುಮಂತ ಕೆ. ಭಜಂತ್ರಿ ರವರ ನೇತೃತ್ವದಲ್ಲಿ ಶ್ರೀ ಕುಮಾರ್ ಎಂ., ಪಿಎಸ್‌ಐ, ಶ್ರೀ ಮಹದೇವ ಹೆಚ್.ಜೆ., ಪಿಎಸ್‌ಐ. ಶ್ರೀ ನಾರಾಯಣ, ಎಎಸ್‌ಐ, ಮಹೇಶ ಹೆಚ್.ಎಸ್., ಹೆಚ್.ಸಿ. 7649, ಶ್ರೀ ಸಲೀಂಪಾಷಾ, ಹೆಚ್.ಸಿ. 6972, ಶ್ರೀ ಮುರಳಿಧರ ಹೆಚ್.ಸಿ. 8701, ಶ್ರೀ ನಾಗಪ್ಪ ಜೋಗಿ, ಹೆಚ್‌.ಸಿ. 10819, ಶ್ರೀ ಶಶಿಕಾಂತ್ ಜಂಭಗಿ, ಹೆಚ್‌.ಸಿ. 11057, ಶ್ರೀ ರಂಗನಾಥ್, ಹೆಚ್.ಸಿ. 7325, ಶ್ರೀ ನಾಗೇಶ್ ಪಿ.ಸಿ. 19377, ಶ್ರೀ ಅಭಿಷೇಕ್, ಪಿ.ಸಿ. 16308, ಶ್ರೀ ಮಂಜುನಾಥ ಪಿ.ಸಿ. 16630 ರವರುಗಳ ತಂಡ ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *