ಸಿ.ಸಿ.ಬಿ. ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ಮಾಸ್ಟರ್ ಬುಕ್ಕಿಯಾದ ಓರ್ವ ವ್ಯಕ್ತಿಯ ಬಂದನ ಒಟ್ಟು 11,50,500/- ನಗದು ಹಣ ವಶ, ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್ ಖಾತೆ ವಹಿವಾಟಿನ ಸ್ಥಗಿತ, ಒಟ್ಟು 41,71,000/- ಫ್ರೀಜ್ ಹಾಗೂ6 ಮೊಬೈಲ್ ಫೋನ್‌ಗಳು ಮತ್ತು 1 ಟ್ಯಾಬ್ ವಶ.

ನ್ಯಾಷನಲ್ ಕಾಲೇಜ್ ಮುಂಭಾಗ, ಪಂಪ ಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ್ ನಿಲಯದ ಮನೆಯ ಮುಂಭಾಗದ ಫುಟ್‌ಪಾತ್‌ನಲ್ಲಿ ಒಬ್ಬ ಆಸಾಮಿಯು ಸೂಪರ್ ಮಾಸರ್ ಬುಕ್ಕಿಯ ಕಡೆಯಿಂದ ಕ್ರಿಕೆಟ್ ಬೆಟ್ಟಿಂಗ್ allexch.bet ಎಂಬ ಆಪ್/ವೆಬ್‌ಸೈಟ್‌ನ ಯೂಸರ್‌ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಪಂಟರುಗಳಿಗೆ ಕೊಟ್ಟು, ಅವರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡಿಸಲು ಹಣ ಸಂಗ್ರಹಿಸಿ ರಿಚಾರ್ಜ್ ಮಾಡಲು ವಾಟ್ಸಪ್ ಮುಖೇನ ಸೂಪರ್ ಮಾಸ‌ ಬುಕ್ಕಿಯೊಂದಿಗೆ ವ್ಯವಹರಿಸುತ್ತಿರುವ ಬಗ್ಗೆ ಸಿ.ಸಿ.ಬಿ. ಘಟಕದ ವಿಶೇಷ ವಿಚಾರಣಾ ದಳದ ಅಧಿಕಾರಿಗಳಿಗೆ ಖಚಿತ ಮಾಹಿತಿಯು ಬಂದಿರುತ್ತದೆ. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದು, ಕಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ ಒಬ್ಬ ಮಾಸರ್‌ ಬುಕ್ಕಿಯನ್ನು ವಶಕ್ಕೆ ಪಡೆದು, ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತದೆ.

ಈ ಪಕರಣವನ್ನು ಸಿ.ಸಿ.ಬಿ. ಘಟಕಕ್ಕೆ ವರ್ಗಾವಣೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸಿದ್ದು, ಸದರಿ ಪ್ರಕರಣದ ಪ್ರಮುಖ ಆರೋಪಿತನು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು, ಅಜೆಕಾರ ಪೊಲೀಸ್‌ ಠಾಣೆ ಸರಹದ್ದಿನ ಒಂದು ಮನೆಯಲ್ಲಿ ವ್ಯವಸ್ಥಿತವಾಗಿ allexch.bt ಹಾಗೂ ಇತರೆ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಪ್‌ಗಳ ನಿರ್ವಹಣೆಯ ಸಂಬಂಧ ಹೊರರಾಜ್ಯದಿಂದ 4 ಜನ ಆಸಾಮಿಗಳನ್ನು ಕರೆತಂದು ಟೀಂ ಡೆವಲಪರ್ ಎಂಬ ವಾಟಪ್‌ಗ್ರೂಪ್ ರಚಿಸಿಕೊಂಡು, ಅವರುಗಳಿಗೆ ತರಬೇತಿ ನೀಡಿರುತ್ತಾರೆ. ದಿನಾಂಕ: 16.ll.2023 ರಂದು ಸಿ.ಸಿ.ಬಿ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸದರಿ ಸ್ಥಳದ ಮೇಲೆ ದಾಳಿ ಮಾಡಿ, ಒಟ್ಟು 150.500/- ನಗದು ಹಣ ವಶಕ್ಕೆ ಪಡೆದು. ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್ ಖಾತೆಗಳಿಂದ ವಹಿವಾಟನ್ನು ಸ್ಥಗಿತಗೊಳಿಸಿ ಒಟ್ಟು 41,71,000/- ಹಣ ಫೀಜ್ ಮಾಡಲಾಗಿದೆ. ಸದರಿ ಆಸಾಮಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 6 ಮೊಬೈಲ್ ಫೋನ್‌ಗಳು ಮತ್ತು 1 ಟ್ಯಾಬ್ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿರುತ್ತದೆ.

ಸದರಿ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ವಿಶೇಷ ವಿಚಾರಣಾ ದಳ ರವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ. ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಜಿ.ಟಿ.ಶ್ರೀನಿವಾಸ್ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ.ಪದ್ಮನಾಭ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿರುತ್ತಾರೆ.

Leave a Reply

Your email address will not be published. Required fields are marked *