ಕೊಡಗು ಜಿಲ್ಲಾ ಪೊಲೀಸ್ ಹಾಗು ಆರ್.ಎಫ್.ಎಸ್.ಎಲ್. ಮೈಸೂರು ವತಿಯಿಂದ \”ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣ ಗಳಲ್ಲಿ ವೈಜ್ಞಾನಿಕ ನೆರವು\” ಕಾರ್ಯಾಗಾರವನ್ನು ಶ್ರೀ ಬಿ.ಪಿ. ದಿನೇಶ್ ಕುಮಾರ್, ಡಿವೈ.ಎಸ್ಪಿ. ಮಡಿಕೇರಿ ಉಪ ವಿಭಾಗರವರ ಅಧ್ಯಕ್ಷತೆಯಲ್ಲಿ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಏರ್ಪಡಿಸ ಲಾಗಿತ್ತು. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ವೈಜ್ಞಾನಿಕ ನೆರವನ್ನು ಪಡೆಯುವ ಕುರಿತು ಮೈಸೂರಿನ ಆರ್.ಎಫ್.ಎಸ್.ಎಲ್ ಉಪ ನಿರ್ದೇಶಕರಾದ ಡಾ: ಚಂದ್ರಶೇಖರ್ ರವರು ಉಪನ್ಯಾಸವನ್ನು ನೀಡಿದರು ಹಾಗೂ ಕೃತ್ಯ ನಡೆದ ಸ್ಥಳದಲ್ಲಿ ಸಾಕ್ಷ್ಯಾಧಾರವನ್ನು ಪಡೆದು ಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅಣುಕು ಪ್ರದರ್ಶನ ನೀಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್