ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಫೆಬ್ರವರಿ27 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ
ಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು .
ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೂಲೀಸ್ ಠಾಣೆ ವತಿಯಿಂದ ಶನಿವಾರ ಗಂಟೆಗೆ ದೂರುದಾರರ ದಿನ ಮತ್ತು ಜನಸಂಪರ್ಕ ಸಭೆಯನ್ನು ಪೊಲೀಸ್ ಠಾಣೆ ಹತ್ತಿರ ನಡೆಸಲಾಯಿತು .
ಠಾಣಾಧಿಕಾರಿಯಾದ ಶ್ರೀ .ಡಿ.ಎನ್. ನಟರಾಜ್ ಅವರ ನೇತೃತ್ವದಲ್ಲಿ ಮಾಸಿಕ ಜನಸಂಪರ್ಕ ಸಭೆ ನಡೆಸಲಾಯಿತು ,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳು ಹೇಳಿ ಕೊಂಡು ಮತ್ತು ಸಲಹೆಗಳನ್ನು ಠಾಣಾಧಿಕಾರಿಗೆ ತಿಳಿಸಿದರು .ಕೆಲವು ಸಮಸ್ಯೆಗಳು ಸ್ಥಳದಲ್ಲೇ ಪರಿಹರಿಸಲಾಯಿತು .
ಸುದ್ದಗುಂಟೆಪಾಳ್ಯ ಸಾರ್ವಜನಿಕರು ಹೆಚ್ಚಾಗಿ ಸಂಚಾರ ಸಮಸ್ಯೆ ವನ್ನು ಠಾಣಾಧಿಕಾರಿಗೆ ತಿಳಿಸಿದರು .ಈ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು\’ ಅವರ ದೂರು , ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಯಿತು .ಅಲ್ಲದೆ ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಠಾಣೆಗೆ ಭೇಟಿ ನೀಡಿ ತಮ್ಮ ದೂರು ದಾಖಲಿಸಬಹುದು ಎಂದು ಠಾಣಾಧಿಕಾರಿ ಶ್ರೀ .ಡಿ .ಎನ್ .ನಟರಾಜ್ ಹೇಳಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ ,
ಶ್ರೀ .ಜಾನ್ ಪ್ರೇಮ್ .