ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ವಿರುದ್ದ \”ತಡೆ ಅರಿವು ನಡೆ\” ಜಾಥಾ ನಡೆಸಲಾಯಿತು. ಉಪ ಪೊಲೀಸ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸುಲು,ಭಾ.ಪೊ.ಸೇ.ರವರು ಜಾಥಾಗೆ ಚಾಲನೆ ನೀಡಿದರು. ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ಎಲ್ಲ ಹಿರಿಯ ಕಿರಿಯ ಪೊಲೀಸ ಅಧಿಕಾರಿ ಸಿಬ್ಬಂದಿಯವರು ಜಾಥಾದಲ್ಲಿ ಪಾಲ್ಗೊಂಡಿದ್ದರು.