ದಿನಾಂಕ: 25-09-2023 ರಂದು ಬೆಂಗಳೂರು ನಗರ, ರಾಜಾಜಿನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ನಂ 42 ಮಡಿಗೇಟ್ಸ್ ಎಲ್.ಎಲ್.ಪಿ ಎಂಬ ಫಾರ್ಮಸಿ ಕಂಪನಿಯಲ್ಲಿ, ಅವಧಿ ಮೀರಿದ ಔಷಧಿ ಮತ್ತು ಕಾಸ್ಮಿಟಿಕ್ ವಸ್ತುಗಳು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಫಾರ್ಮಸಿ ಕಂಪನಿಯ ಮೇಲೆ ದಾಳಿ ಮಾಡಿ ಸುಮಾರು 1 ಕೋಟಿ 50 ಲಕ್ಷ ಮೌಲ್ಯದ ಅವಧಿ ಮೀರಿದ ದಿನ ಬಳಕೆ ಮಾಡುವ ವಿಟಮನಿ “A” ಬಿ3 ಮಾತ್ರೆಗಳುಳ್ಳ ಸಾವಿರಾರು ಬಾಕ್ಸಿಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಕಂಪನಿಯ ಮಾಲೀಕರ ವಿರುದ್ಧ ರಾಜಾಜಿನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಇಬ್ಬರು ಆರೋಪಿಗಳನ್ನು (ತಂದೆಹಾಗೂ ಮಗ) ಬಂಧಿಸಲಾಗಿರುತ್ತದೆ.
ಈ ಫಾರ್ಮಸಿ ಕಂಪನಿಯ ಮಾಲೀಕರು ಕಸ್ಮಿಟಿಕ್ ವಸ್ತುಗಳು ಮತ್ತು ಔಷಧಿಗಳನ್ನು ಹೊರ ರಾಜ್ಯಗಳಾದ ಹರಿಯಾಣ, ಪಂಜಾಬ್, ಚಂಡಿಗಡ ಹಾಗೂ ಮುಂತಾದ ರಾಜ್ಯಗಳಿಂದ ತರಿಸಿಕೊಂಡು ಆವುಗಳನ್ನು ಮಾರಾಟ ಮಾಡಿ, ಮಾರಾಟ ಮಾಡಿ ಉಳಿದ ಹಾಗೂ ಅವಧಿ ಮೀರಿದ ಔಷಧಿಗಳು ಮತ್ತು ಕಾಸ್ಟಿಟಿಕ್ ಅನ್ನು ರೀ ಲೇಬಲ್ / ಪ್ಯಾಕ್ ಮಾಡಿ ಮತ್ತೆ ಹೊಸ ಅವಧಿಯ ಲೇಬಲ್ ಮತ್ತು ಪ್ಯಾಕ್‌ಗಳನ್ನು ಮಾಡಿ ನೈಜ ಕಾಟಿಕ್ ಮತ್ತು ಔಷಧಿಗಳೆಂದು ಜನರಿಗೆ ನಂಬಿಸಿ ತಮ್ಮ ಸ್ವಂತ ಲಾಭದ ಉದ್ದೇಶದಿಂದ & ಸಾರ್ವಜನಿಕರ ಜೀವಕ್ಕೆ ಹಾನಿ ಮಾಡುವ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಹೊರ ರಾಜ್ಯಗಳಾದ ತೆಲಾಂಗಾಣ ರಾಜ್ಯದ ಹೈದರಾಬಾದ್, ಆಂಧ್ರ ಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ರಾಜಮುಂಡ್ರಿ ಮತ್ತು ಎಲ್ಲೂರು ನಗರದ ಮೆಡಿಕಲ್ ಶಾಪ್‌ಗಳು ಮತ್ತು ಸಲೂನ್ ಗಳಿಗೆ ಸರಬರಾಜು ಮಾಡುತ್ತಿದ್ದರು, ಈ ವಿಚಾರವನ್ನು ಸೂಕ್ತ ಕ್ರಮಕ್ಕಾಗಿ ಔಷಧ ನಿಯಂತ್ರಣ ಇಲಾಖೆಗೆ ಮಾಹಿತಿಯನ್ನು ತನಿಖಾ ಕಾಲದಲ್ಲಿ ನೀಡಿರುತ್ತೆ.
ಈವರೆವಿಗಿನ ತನಿಖೆಯಿಂದ ಅವಧಿ ಮೀರಿದ ಔಷಧಿಗಳಾದ:
1] GLUTIVE ENRICH, 2] AZELAK, 3] AZELIA, 4] B3 BOOSTER, 5] B3 VIT, 6] REXOGETZS, 7] SALIGLOW, 8] ASCO-1000, 9] GLUTIVE 750 TABLETS, 10] ITRAPHVT, 11] C-GEN, 12] ACORBIC 20, 13] TERBRACK, 14] TACROGETZS, 15] LULILOGIX, 16] ADAGETZS C GEL. 17] BENZDUO GEL, 18] LEVOGETZS M, 19] VITAMIN C
ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರು, ಅಪರಾಧ\’ ರವರ ಮಾರ್ಗದರ್ಶದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಶ್ಲಾಘಿಸಿರುತ್ತಾರೆ.
ಸಾರ್ವಜನಿಕರಿಗೆ ಸೂಚನೆ:
ಸಾರ್ವಜನಿಕರು ಈ ರೀತಿ ಯಾವುದೇ ಕಾಸ್ಟೆಟಿಕ್ ಅಥವಾ ಔಷಧಿಗಳನ್ನು ಖರೀದಿಸುವ ಮುನ್ನ ಅದರ ಲೇಬಲ್ ಮತ್ತು ಮುಕ್ತಾಯದ ಅವಧಿಯ ದಿನಾಂಕಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಉತ್ತಮ.