ಕೊಡಿಗೆಹಳ್ಳಿ ಪೊಲೀಸ್ ಠಾಣಾ ಸರಹದಿನಲ್ಲಿ ಮಾದಕವನ್ನು ಹೆರಾಯಿನನ್ನು ಸಾರ್ವಜನಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ ಕಂಪನಿಯ ಉದ್ಯೋಗಿಗಳಿಗೆ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುವ ದಂಧೆಯಲ್ಲಿ ತೊಡಗಿದ್ದ 4 ಜನ ಆಸಾಮಿಗಳನ್ನು ದಿನಾಂಕ 03/09/2023 ರಂದು ದಾಳಿಮಾಡಿ ದಸ್ತಗಿರಿಮಾಡಿ. ಆರೋಪಿತರಿಂದ ಸುಮಾರು 3 ಲಕ್ಷ ಬೆಲೆ ಬಾಳುವ 61 ಗಾಂ ತೂಕದ ಮಾದಕ ವಸ್ತು ಹೆರಾಯಿನ್ ಮತ್ತು ಕೃತಕ್ಕೆ ಬಳಸಿದ 3 ಮೊಬೈಲ್ ಫೋನ್ ಹಾಗೂ ಒಂದು ಮಾರುತಿ ಆಲ್ಟೊ ಕಾರ್ ವಶಪಡಿಸಿಕೊಂಡಿರುತ್ತದೆ ತನಿಖೆ ಮುಂದುವರೆದಿರುತ್ತದೆ.
ಬೆಂಗಳೂರು ನಗರ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಬಿ.ಎಂ. ಲಕ್ಷ್ಮಿ ಪ್ರಸಾದ್, ರವರ ಮಾರ್ಗದರ್ಶನದಲ್ಲಿ, ಶ್ರೀ ಮಂಜುನಾಥ್, ಆ. ಸಹಾಯಕ ಪೊಲೀಸ್ ಆಯುಕ್ತರು, ಯಲಹಂಕ ಉಪ ವಿಭಾಗ ರವರ ನೇತೃತ್ವದಲ್ಲಿ, ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್, ಎಂ.ಎ. ಹಾಗು ಸಿಬ್ಬಂದಿಯವರುಗಳು ಆರೋಪಿಗಳನ್ನು ಬಂದಿಸಿ ಮಾಲನ್ನು ವಶಪಡಿಸಿಕೊಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.