ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೇತನ್ ರವರು ದಿನಾಂಕ:02-06- 2023 ರಂದು ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಟಯೋಟಾ ಇನ್ನೋವಾ ಕಾರ್‌ನಲ್ಲಿ ಇಟ್ಟಿದ್ದ ಒಟ್ಟು 15,00,000/-ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ದೂರು ನೀಡಿದ ಮೇರೆಗೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ 06-06-2023 ರಂದು ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 13.97,000/- ರೂ ನಗದುಹಣ ಮತ್ತು ಕೃತ್ಯಕ್ಕೆ ಉಪಯೊಗಿಸುತ್ತಿದ್ದ ಎರಿಟಿಗಾ ಕಾರು, ಒಂದು ಅಪಾಚೆ ಹಾಗೂ ಒಂದು ಹೊಂಡಾ ಹಾರ್ನೆಟ್ ಮೋಟಾರ್‌ಸೈಕಲ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳು ಬೆಂಗಳೂರು ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆಯ ಈ ಹಿಂದೆಯು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ಸಹ ಇದೇ ರೀತಿ ಕಳವು ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರದ ಡಿ.ಸಿ.ಪಿ(ಪಶ್ಚಿಮ) ಶ್ರೀ ಲಕ್ಷ್ಮಣ್ ಬ.ನಿಂಬರಗಿ, ಕೆಂಗೇರಿಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭರತ್.ಎಸ್.ರೆಡ್ಡಿ ರವರುಗಳ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಎಂ. ಶಿವಣ್ಣ ರವರ ನೇತೃತ್ವದಲ್ಲಿ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
A.Antony Raju-Citizen Reporter-Karnataka