\”ದಿನಾಂಕಃ15-09-2022 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ 16-09-2022 ರಂದು ಬೆಳಗ್ಗೆ 08-30 ಗಂಟೆಯ ನಡುವಿನ ಸಮಯದಲ್ಲಿ ಫಿರ್ಯಾದಿ ಮಾಲಿಕತ್ವದ ಶಾಂತದುರ್ಗಾ ಎಲೆಕ್ಟ್ರಿಕಲ್ಸ್ ಅಂಗಡಿಯ ಶೆಟರಗೆ ಅಳವಡಿಸಿದ್ಧ ಸೆಂಟ್ರ ಲಾಕನ್ನು ಮೀಟ ಮುರಿದು ನಂತರ ಶೆಟರಗೆ ಹಾಕಿದ್ದ ಬೀಗದ ಕೈಯನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮುರಿದು ಶೆಟರನ್ನು ಓಪನ ಮಾಡಿ ಅಂಗಡಿಯೊಳಗೆ ಹೋಗಿ ಅಂಗಡಿಯಲ್ಲಿ ಸುಮಾರು 8 ಲಕ್ಷ 69 ಸಾವಿರ ರೂಪಾಯಿಯ ಬೆಲೆ ಬಾಳುವ ಎಲೆಕ್ಟ್ರಿಕಲ್ ವೈರ ಬಂಡಲಗಳನ್ನು ಮತ್ತು MCB ಪೀಸಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯಾದ
1) ಈಶ್ವರಸಿಂಗ್ ತಂದೆ: ರಣಜಿತಸಿಂಗ್ ರಜಪೂತ,ಪ್ರಾಯ: 30 ವರ್ಷ, ಸಾ: ಜೂನಿಬಾಲ್, ತಾ: ಬಾಗೋಡಾ, ಜಿಲ್ಲಾ: ಜಾಲೋರ್ ರಾಜಸ್ಥಾನ ರಾಜ್ಯ, ಹಾಲಿ ಮನೆ ನಂ -176 ಜೂನಸವಾಡಾ, ಮಾಂದ್ರೇಮ್, ಉತ್ತರ ಗೋವಾ ರಾಜ್ಯ ಈತನನ್ನು ಬಂಧಿಸಿ 3,81,849/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಆಪಾದಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಇರುತ್ತದೆ.
ಈ ಪ್ರಕರಣದ ಆರೋಪಿಗಳ ಪತ್ತೆಗೆ ಮಾನ್ಯ ಎಸ್.ಪಿ ಕಾರವಾರ ಡಾ|| ಸುಮನ ಪೆನ್ನೇಕರ, ಮಾನ್ಯ ಅಡಿಷನಲ್ ಎಸ್ ಪಿ ಶ್ರೀ ಎಸ್. ಬದ್ರಿನಾಥ ರವರ ನಿರ್ದೇಶನದಂತೆ, ಶ್ರೀ ವೆಲಂಟೈನ್ ಡಿಸೋಜಾ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕಾರವಾರ ರವರ ಮಾರ್ಗದರ್ಶನದಲ್ಲಿ, ಹಾಗೂ ತನಿಖಾಧಿಕಾರಿಯಾದ ಶ್ರೀ ಗೋವಿಂದರಾಜ ದಾಸರಿ ಮಾನ್ಯ ಪೊಲೀಸ್ ವೃತ್ತ ನಿರೀಕ್ಷಕರು ಕದ್ರಾ ರವರ ನೇತೃತ್ವದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಎಂ ನಿಂಗೊಳ್ಳಿ ಸಿಬ್ಬಂದಿಗಳಾದ ಸಿ.ಹೆಚ್.ಸಿ 868 ಶ್ರೀಕಾಂತ ಡಿ ನಾಯ್ಕ, ಸಿ.ಹೆಚ್.ಸಿ 1488 ಅರುಣ್ ಕಾಂಬ್ಳೆ ಸಿಹೆಚ್‌ಸಿ 1331 ಜಯವಂತ ಸಿಪಿಸಿ 703 ವಿನಯ್.ಎಸ್.ಕಾಣಕೂಣಕರ, ಸಿಪಿಸಿ 1142 ಪ್ರವೀಣ್ ಗವಣೀಕರ, ಸಿಪಿಸಿ 1314 ಮಹಾದೇವ ಸಿದ್ಧಿ, ಸಿಪಿಸಿ 596 ಬಸವರಾಜ ಈ, ಕದ್ರಾ ಪೊಲೀಸ್ ಠಾಣೆಯ ಎಎಸ್‌ಐ ಮಹಾದೇವ ಫಳ, ಹುಸೇನ್ ಚಪ್ಪರಕರ ಹಾಗೂ ಸಿಪಿಸಿ 573 ನಾಗರಾಜ ತಿಮ್ಮಪುರ, ಎಪಿಸಿ 503 ಜಗದೀಶ್ ಆರ್ ಕೆ ರವರು ಪಾಲ್ಗೊಂಡಿದ್ದರು.ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತೇನೆ.