ಜಿಲ್ಲೆಯಲ್ಲಿ ಸಮುದಾಯ ಪೊಲೀಸ್ ಮತ್ತು ವಿದ್ಯಾರ್ಥಿಗಳು ಎಂಬ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಎಲ್ಲಾ ಠಾಣಾ ವ್ಯಾಪ್ತಿಗಳ ಪ್ರೌಢಶಾಲೆಗಳಲ್ಲಿ ದಿ:17.06.2022 ರಿಂದ ಎರಡನೇ ಹಂತವನ್ನು ಒಟ್ಟು 53 ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಐದು ವಾರಗಳ ಕಾಲ ನಡೆಯಲಿದೆ.
ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನವ ನಾಗರಿಕ ಸಮಾಜದ ಸುಧಾರಣೆಗಾಗಿ ನಾಯಕತ್ವ, ನಾಗರಿಕ ಜ್ಞಾನ, ಕಾನೂನು,ಸ್ವಯಂ ಶಿಸ್ತು, ನೈತಿಕತೆ,ಮೌಲ್ಯಗಳು ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಪ್ರತಿರೋಧ ದಂತಹ ಸಕಾರಾತ್ಮಕ ಆಲೋಚನೆಗಳು ದಾರಿತೋರಿಸುವ ಬಗ್ಗೆ ತರಬೇತಿಯನ್ನು ನೀಡುವುದಾಗಿರುತ್ತದೆ.
ಪೊಲೀಸರು ಶಾಲಾ-ಕಾಲೇಜುಗಳಿಗೆ ಖುದ್ದಾಗಿ ತೆರಳಿ ಮಕ್ಕಳ ಜೊತೆ ಸಂವಾದ ನಡೆಸಿ, ಮಾದಕ ವ್ಯಸನಗಳು ಮತ್ತು ಅದರ ದುಷ್ಪರಿಣಾಮಗಳು ಸೈಬರ್ ಅಪರಾಧಗಳು, ಸಂಚಾರ ನಿಯಮಗಳ ಪಾಲನೆ, ತಂದೆ-ತಾಯಿಗಳಿಗೆ ಗೌರವ ನೀಡುವುದು ಹೀಗೆ ಮಕ್ಕಳ ಮನೋವಿಕಾಸ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಪೊಲೀಸರು ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಮೂಡಿಸುವ ಹಾಗೂ ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಿ ಅವರ ಅನುಮಾನಗಳನ್ನು ಪರಿಹರಿಸುವರು.