ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಅಂಕೋಲಾ ಕೆ.ಸಿ ರಸ್ತೆಯಲ್ಲಿನ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಮ್ ದಲ್ಲಿ ದಿನಾಂಕ: 21-12-2021 ರಂದು ಮಧ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ನಡುವಿನ ಅವಧಿಯಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಅಂಕೋಲಾ ಬೋಳೆ ನಿವಾಸಿ ಕಿಶೋರ ತಂದೆ ವಿಠ್ಠಲ್ ನಾಯಕ ರವರ ಮಗ ಕು॥ ವಿಜೇತ ಕಿಶೋರ ನಾಯಕ ಇತನಿಗೆ ವಂಚಿಸಿ ಇತನ ಕೈಯಲ್ಲಿದ್ದ ಎ.ಟಿ.ಎಮ್ ಕಾರ್ಡನ್ನು ಯಾರೋ ಅಪರಿಚಿತರು ವಂಚಿಸಿ ಪಡೆದುಕೊಂಡು ಆನಂತರದಲ್ಲಿ ಬೇರೆ ಬ್ಯಾಂಕಿನ ಎ.ಟಿ.ಎಮ್ ನಿಂದ ಕಿಶೋರ ನಾಯಕ ರವರ ಅಂಕೌಟ್ ನಿಂದ 44,000 ರೂ ಹಣವನ್ನು ತೆಗೆದುಕೊಂಡ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಿನಾಂಕ: 28-12-2021 ರಂದು ಪ್ರಕರಣ ದಾಖಲಾಗಿದ್ದು
ಈ ಪ್ರಕರಣವು ಪೊಲೀಸ್ ಇಲಾಖೆಗೆ ಒಂದು ಸವಾಲಿನ ಪ್ರಕರಣ ಸಹ ಅಗಿದ್ದು, ಆರೋಪಿತರುಗಳನ್ನು ಪತ್ತೆ ಮಾಡುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಡಾ|| ಸುಮನ್ ಡಿ. ಪೆನ್ನೇಕರ ರವರ ನಿರ್ದೇಶನದದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಬದ್ರಿನಾಥ ಎಸ್, ಹಾಗೂ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲೆಂಟೈನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ಶ್ರೀ ಸಂತೋಷ ಶೆಟ್ಟಿ ರವರ ನೇತೃತ್ವದದಲ್ಲಿ ಠಾಣೆಯ ಪಿ.ಎಸ್.ಐ ಶ್ರೀ ಪ್ರವೀಣಕುಮಾರ, ಆರ್ ಮತ್ತು ಶ್ರೀ ಪ್ರೇಮನಗೌಡ ಪಾಟೀಲ್, ಎ.ಎಸ್.ಐ, ಬಾಬು ಎಸ್ ಅಗೇರ ಸಿ.ಹೆಚ್.ಸಿ 1524 ಪರಮೇಶ, ಎಸ್ ಹಾಗೂ ಸಿಬ್ಬಂದಿಗಳಾದ ಸಿ.ಪಿ.ಸಿ, 948 ಶ್ರೀಕಾಂತ ಕಟಬರ, ಸಿ.ಪಿ.ಸಿ. 1094 ಮಂಜುನಾಥ ಲಕಮಾಪುರ ಸಿ.ಪಿ.ಸಿ 564 ಭಗವಾನ್ ಗಾಂವಕರ, ಸಿ.ಪಿ.ಸಿ, 1067 ಮನೋಜ ಡಿ, ತಂಡವನ್ನು ರಚಿಸಿಕೊಂಡು ಆರೋಪಿತರ ಹತ್ತಿಗೆ ಎಲ್ಲಾ ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಅಂತರರಾಜ್ಯ ವಂಚಕನಾದ ಅರೋಪಿ ವಿಜಯ್ ತಂದೆ ಅಂಗದಪ್ರಸಾದ ದ್ವಿವೇದಿ, ವಯಸ್ಸು: 34 ವರ್ಷ, ವೃತ್ತಿ: ಡ್ರೈವರ್, ವಾಸ: ತಿಸೇನ್ ತುಲಾಪುರ್, ಮೇಝಾ ತಾಲೂಕು, ಪ್ರಯಾಗರಾಜ್ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ, ಹಾಲಿ ರೂಮ್ ನಂ. 12, ಜೈದುರ್ಗಾ ಚಾಳ್, ಶಾಂತಿನಗರ, ಕುರ್ಲಾ, ಅಂಧೇರಿ ರೋಡ್, ಸಫೇದ್ ಪೂಲ್, ಕುರ್ಲಾ, ವೆಸ್ಟ್ ಮುಂಬೈ -400 072 ಇತನಿಗೆ ಮುಂಬೈ ಕುರ್ಲಾ ಸಾಕಿನಾಕಾದಲ್ಲಿ ವಶಕ್ಕೆ ಪಡೆದು, ದಸ್ತಗಿರಿ ಮಾಡಿ ತನಿಖೆ ಕೈಗೊಂಡ ಕಾಲಕ್ಕೆ ಆರೋಪಿತನು ಅಂಕೋಲಾದಲ್ಲಿ ಅಲ್ಲದೇ ಶಿರಸಿ ಸೇರಿದಂತೆ ರಾಜ್ಯದ ಇತರೇ ಕಡೆಗಳಲ್ಲಿಯೂ ಸಹ ಇದೇ ಮಾದರಿಯ ಕೃತ್ಯ ಎಸಗಿರುವ ಬಗ್ಗೆ ತಿಳಿದು ಬಂದಿರುತ್ತದೆ. ದಸ್ತಗಿರಿ ಮಾಡಿದ ಆರೋಪಿತನಿಂದ ಒಟ್ಟು 42,000 ರೂ ಹಾಗೂ ಕೃತ್ಯ ಮಾಡಲು ಬಳಸಿರುವ ಕಾರ್ ನಂ. MH-03 HC 1047 ನೇದ್ದನ್ನು ವಶಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು , ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಇರುತ್ತದೆ.
ಎ.ಟಿ.ಎಮ್. ದಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಮುಗ್ಧ ಜನರಿಗೆ ವಂಚಿಸಿ ಗ್ರಾಹಕರಿಂದ ಎ.ಟಿ.ಎಮ್ ಕಾರ್ಡ ಪಡೆದುಕೊಂಡು ಅವರ ಹಣವನ್ನು ಮೋಸದಿಂದ ಪಡೆದುಕೊಳ್ಳುತ್ತಿದ್ದ ಆರೋಪಿ ವಿಜಯ್ ತಂದೆ ಅಂಗದಪ್ರಸಾದ ದ್ವಿವೇದಿ ಇತನ ಮಾಹಿತಿ ಸಂಗ್ರಹಿಸಿ, ಇತನಿಗೆ ಪತ್ತೆಮಾಡಿ ವಂಚನೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|| ಸುಮನ್ ಡಿ ಪೆನ್ನೇಕರ್ ರವರು ಅಭಿನಂದಿಸಿ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.