ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ಕೋನ ವಂಶಿ ಕೃಷ್ಣ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀ ಗಣೇಶ್, ಕೆ.ಎಸ್.ಪಿ.ಎಸ್, ಶ್ರೀ.ಹೆಚ್,ಎಸ್,ಜಗಧೀಶ್, ಪೊಲೀಸ್ ಉಪಾಧೀಕ್ಷಕರು, ನೆಲಮಂಗಲ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಪಿ.ಐ ಶ್ರೀ. ಎ.ವಿ.ಕುಮಾರ್ ರವರ ನೇತೃತ್ವದಲ್ಲಿ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರ ಖಚಿತ ಮಾಹಿತಿಯ ಮೇರೆಗೆ ಒಟ್ಟು 3 ಪ್ರಕರಣಗಳಲ್ಲಿ ಭೇದಿಸಿ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಸುಮಾರು 6 ಲಕ್ಷ ಬೆಲೆ ಬಾಳುವ 20 ಟೈರ್ ಮತ್ತು ಡಿಸ್ಕ್ ಗಳನ್ನು ಹಾಗೂ ರೂ.28,000/- ಬೆಲೆ ಬಾಳುವ 600 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ. ಈ ಪತ್ತೆ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ಕೋನ ವಂಶಿ ಕೃಷ್ಣ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀ ಗಣೇಶ್, ಕೆ.ಎಸ್.ಪಿ.ಎಸ್, ಶ್ರೀ.ಹೆಚ್,ಎಸ್,ಜಗಧೀಶ್, ಪೊಲೀಸ್ ಉಪಾಧೀಕ್ಷಕರು, ನೆಲಮಂಗಲ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನೆಲಮಂಗಲ (ಗ್ರಾ) ವೃತ್ತದ ಸಿ.ಪಿ.ಐ ಶ್ರೀ.ಹರೀಶ್ ರವರ ನೇತೃತ್ವದಲ್ಲಿ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರುಗಳು ನೆಲಮಂಗಲ ಉಪವಿಭಾಗ ಹಾಗೂ ಇತರೆ ಠಾಣಾ ವ್ತಾಪ್ತಿಗಳಲ್ಲಿ ಬ್ಯಾಂಕ್ ನಿಂದ ಹಣವನ್ನು ಡ್ರಾ ಮಾಡಿಕೊಂಡು ಬರುತ್ತಿದ್ದ ಸಾರ್ವಜನಿಕರ ಗಮನವನ್ನು ಬೇರೆ ಕಡೆ ಸೆಳೆದು ಹಣವನ್ನು ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ರೂ.15,20,000/- ನಗದು ಮತ್ತು 3 ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಪತ್ತೆ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,