ಎ. ಪಿ .ಎಂ .ಎಂ. ನ್ಯಾಯಾಲಯದಲ್ಲಿ ಆರೋಪಿಗೆ 3ವರ್ಷ ಶಿಕ್ಷೆ ಹಾಗೂ ಮೂವತ್ತು ಸಾವಿರೂ ದಂಡ ವಿಧಿಸಿ ಶಿಕ್ಷೆಗೆ ಗುರಿ ಪಡಿಸಿರುತ್ತಾರೆ. ಪ್ರಯಾಣಿಕ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವರ್ತನೆ ತೋರಿದ ಉಬರ್ ಕಂಪನಿ ಕಾರು ಚಾಲಕ ಸುರೇಶ್ ಎಂಬಾತನನ್ನು ಬೆಂಗಳೂರು ಮಡಿವಾಳ ಪೊಲೀಸರು 2016 ಬಂಧಿಸಿದರು.
2016 ರಾತ್ರಿ ಎಚ್ಎಸ್ಆರ್ ಲೇಔಟ್ ನ 7ನೇ ಹಂತದಿಂದ ಎಸ್ ಜಿ ಪಾಳ್ಯಕ್ಕೆ ಉಬರ್ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದ ವೇಳೆ, ಆ ಕಾರಿನ ಚಾಲಕ ಸುರೇಶ್ ತನ್ನೆದುರೇ ಹಸ್ತಮೈಥುನ ಮಾಡಿಕೊಂಡಿರುವುದಾಗಿ ಮಹಿಳೆ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಮಡಿವಾಳ ಪೊಲೀಸರು ಚಾಲಕ ಸುರೇಶ್ ನನ್ನು ಬಂಧಿಸಿದರು. ಸುರೇಶ್ ಮೂಲತಃ ಚಿಕ್ಕಬಳ್ಳಾಪುರದವನು ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಶ್ರೀ ಪೌಲ್ ಪ್ರಿಯಕುಮಾರ್ ಪಿ.ಎಸ್ .ಐ ರವರು ತನಿಖಾಧಿಕಾರಿಯಾಗಿದ್ದ ಶ್ರೀ.ಚಂದ್ರ ಬೊಮ್ಮಯ್ಯ ನಾಯಕ್ ,ತನಿಖಾ ಸಹಾಯಕರಾಗಿ ತನಿಖೆ ನಡೆಸಿದ ಹಾಗೂ ನ್ಯಾಯಾಲಯ ಸಿಬ್ಬಂದಿಯಾದ ಶ್ರೀ
. ಮಂಜುನಾಥ ,ಪ್ರೊಸೆಸ್ ಸಿಬ್ಬಂದಿಗಳಾದ ಶ್ರೀ. ಹರೀಶ್ ,ಶ್ರೀ ಮುನಿರಾಜು ರವರು ಸಾಕ್ಷಿದಾರರನ್ನು ಮಾನ್ಯ ಮೂರನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಆರೋಪಿ ಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,