ಚಿತ್ರದುರ್ಗ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ತಂತ್ರಜ್ಞಾನ ಅಳವಡಿಸಿ ಸ್ಮಾರ್ಟ್ ಪೋನ್ ತರಹದ ಉಪಕರಣವನ್ನು ಬಳಸಿ Social Distance & Mask violation ಪ್ರಕರಣಗಳನ್ನು ದಾಖಲಿಸಲು ಕ್ರಮ ಕೈಗೊಂಡಿರುತ್ತದೆ. ಚಿತ್ರದುರ್ಗ ನಗರದಲ್ಲಿರುವ HDFC Bank ವತಿಯಿಂದ ಸದರಿ ಉಪಕರಣಗಳನ್ನು ತಯಾರಿಸುವ Ezetap Company ಯವರಿಂದ 75 ಉಪಕರಣಗಳನ್ನು ಖರೀದಿಸಿ ಚಿತ್ರದುರ್ಗ ಜಿಲ್ಲಾ ಪೊಲೀಸ್ಗೆ ಉಚಿತವಾಗಿ ನೀಡಿರುತ್ತಾರೆ. ಸದರಿ ಉಪಕರಣಗಳನ್ನು ಜಿಲ್ಲೆಯ ವೃತ್ತ/ಉಪಾಧೀಕ್ಷಕರ ಕಛೇರಿಗಳಿಗೆ ಮತ್ತು ಎಲ್ಲಾ ಪೊಲೀಸ್ ಠಾಣೆಗಳಿಗೆ ಕೊಟ್ಟು Social Distance & Mask violation ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಲಾಗಿರುತ್ತದೆ ಮತ್ತು ಉಪಕರಣಗಳನ್ನು ಬಳಕೆ ಮಾಡುವ ಬಗ್ಗೆ ತರಬೇತಿಯನ್ನು ಇಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನೀಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ರಾಧಿಕ.ಜಿ ಐ.ಪಿ.ಎಸ್., ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಹಾನಿಂಗ ಬಿ ನಂದಗಾವಿ ರವರು, ಶ್ರೀ ನಾಗೇಂದ್ರ ಪ್ರಸಾದ್, ಹೆಚ್.ಡಿ.ಎಫ್.ಸಿ ಬ್ಯಾಂಕ್ ವ್ಯವಸ್ಥಾಪಕರು, ಶ್ರೀ ಆಸೀಫ್, ಇಜಿಟ್ಯಾಪ್ ಕಂಪನಿಯ ಜೋನಲ್ ಮ್ಯಾನೇಜರ್, ಮತ್ತು ಚಿತ್ರದುರ್ಗ ನಗರದ ಎಲ್ಲಾ ಪೊಲೀಸ್ ಆಧಿಕಾರಿಗಳು ಭಾಗವಹಿಸಿದ್ದರು ಹಾಗೂ ಜಿಲ್ಲೆಯ ಇತರೆ ಪೊಲೀಸ್ ಅಧೀಕಾರಿಗಳು ಆನಲೈನ್ ಮೂಲಕ ಭಾಗವಹಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್