ಕುಮಟಾ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ:37/2021 ಕಲಂ. 420 ಐ. ಪಿ.ಸಿ . ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿತನಾದ ಕಿರಣ್ ಕುಮಾರ್ ಬಿ.ಕೆ ಸಾ|| ಚನ್ನರಾಯಪಟ್ಟಣ ,ಹಾಸನ್ ಜಿಲ್ಲೆ ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿ ದೂರುದಾರರ ಏ. ಟಿ.ಎಮ್ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿ ವಂಚಿಸಿದ ಬಗ್ಗೆ ತಿಳಿದುಬಂದಿರುತ್ತದೆ. ಇದೇ ರೀತಿ ಆರೋಪಿತನು ರಾಜ್ಯದ ವಿವಿಧ ಜಿಲ್ಲೆ ಗಳಲ್ಲಿ ಅಪರಾಧ ಎಸಗಿದ ಬಗ್ಗೆ ತಿಳಿದು ಬಂದಿರುತ್ತದೆ. ಆರೋಪಿತನಿಂದ 5 ಏ. ಟಿ. ಎಮ್ ಕಾರ್ಡ್,15 ಸಾವಿರ ನಗದು, ಏ. ಟಿ. ಎಮ್ ಕಾರ್ಡ್ ವಂಚಿಸಿ ಖರೀದಿಸಿದ ಬಂಗಾರ, ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್