ಪಿರ್ಯಾದುದಾರರಾದ ಶ್ರೀ ಚಂದ್ರಶೇಖರ ತಂದೆ ನರಸಿಂಹ ಹೆಗಡೆ , ಪ್ರಾಯ : 58 ವರ್ಷ , ವೃತಿ ; ಶಿಕ್ಷಕ , ಸಾ// ಶಾರದಾಗಲ್ಲಿ , ಯಲ್ಲಾಪುರ , ಇವರು ನೀಡಿದ ದೂರಿನಂತೆ ದಿನಾಂಕ : 18-12-2020 ರಂದು ಸಂಜೆ 5-00 ಗಂಟೆಯಿಂದ ದಿನಾಂಕ : 19-12-2020 ರ ರಾತ್ರಿ 08-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ಶಹರದ ಶಾರದಾಗಲ್ಲಿಯಲ್ಲಿರುವ ತಮ್ಮ ಮನೆಯ ಮುಂದಿನ ಬಾಗಿಲ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯ ಬೆಡ್‌ರೂಮ್‌ನಲ್ಲಿದ್ದ ಗೊದ್ರೆಜ್ ಕಪಾಟನ್ನು ಮೀಟಿ ತೆಗೆದು ಅದರಲ್ಲಿದ್ದ ಬೆಳ್ಳಿ , ಬಂಗಾರದ ಆಭರಣ ಕಳ್ಳತನವಾಗಿರುವ ಬಗ್ಗೆ ಯಲ್ಲಾಪುರ ಠಾಣಾ ಗುನ್ನಾ ನಂ ; 221/2020 . ಕಲಂ : 454 , 457 , 380 ಐಪಿಸಿ , ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ .
ಈ ಪ್ರಕರಣವನ್ನು ಭೇದಿಸಿ ಆರೋಪಿತರಾದ 1 ) ಹುಲಗಪ್ಪ @ ಹುಲಿಗ್ಯಾ @ ಹುಲಗೇಶ ತಂದೆ ಹನಮಂತ ಬಂಡಿವಡ್ಡರ , ಪ್ರಾಯ : 32 ವರ್ಷ , ವೃತ್ತಿ : ಗೌಂಡಿ ಕೆಲಸ , ಸಾ || ಲಕ್ಷ್ಮೀಸಿಂಗನಕೇರಿ , ಜಿಲ್ಲಾ || ಧಾರವಾಡ ಹಾಲಿ ಶಿರವಾಡ , ಕಾರವಾರ ಮತ್ತು 2 ) ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ದಸ್ತಗಿರ ಮಾಡಿದ್ದು ಇವರಿಂದ ಸುಮಾರು 42 ಗ್ರಾಂ ತೂಕದ ಬಂಗಾರದ ಆಭರಣಗಳಾದ 1 ] ನಕ್ಲೇಸ್-1, ಉಂಗರು =02, ಕಿವಿಯ ಕುಡುಕು = 2 ಜೊತೆ , ಹಾಗೂ 100 ಗ್ರಾಂ ಬೆಳ್ಳಿಯ ಆಭರಣವನ್ನು ಅ:ಕಿ: 2 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತ ಪಡಿಸಿಕೊಳ್ಳಲಾದ. ಸದ್ರಿ ಆರೋಪಿತರು ಅಂತರ್‌ಜಿಲ್ಲಾ ಕಳ್ಳರಾಗಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ , ಯಲ್ಲಾಪುರ, ಭಟ್ಕಳ, ಸಿದ್ದಾಪುರ, ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ, ಆನವಟ್ಟಿ, ಧಾರವಾಡ ಜಿಲ್ಲೆಯ ಕಲಘಟಗಿ , ಹುಬ್ಬಳ್ಳಿ , ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ. ಅದಲ್ಲದೆ ಕಳೆದ 3-4 ವರ್ಷಗಳಲ್ಲಿ ಯಲ್ಲಾಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಕಳ್ಳತನ ಮತ್ತು ಬ್ಯಾಂಕ ಕಳ್ಳತನವನ್ನು ಮಾಡಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ. ಸದ್ರಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿತನೊಬ್ಬನು ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ .ಶ್ರೀ ರವಿ ನಾಯ್ಕ , ಪೊಲೀಸ್ ಉಪಾಧೀಕ್ಷಕರು ಶಿರಸಿರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ ಯಳ್ಳೂರ . ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ, ಶ್ರೀ ಮಂಜುನಾಥ ಗೌಡರ ಪಿ.ಎಸ್.ಐ. ಪ್ರೋ ಪಿಎಸ್‌ಐ ಮುಷಾಹಿದ್ ಅಹ್ಮದ್ , ಹಾಗೂ ಸಿಬ್ಬಂದಿಯವರಾದ , ಸಿಎಚ್.ಸಿ – ಮಹ್ಮದ ಶಫೀ , ಬಸವರಾಜ ಹಗರಿ , ಗಜಾನನ ನಾಯ್ಕ , ನಾಗಪ್ಪ ಲಮಾಣಿ , ಸಿಪಿಸಿ ವಿನೋದಕುಮಾರ ರೆಡ್ಡಿ , ಬಸವರಾಜ ಡಿ.ಕೆ , ಚನ್ನಕೇಶವ , ಅಮರ , ಗಿರೀಶ ಲಮಾಣಿ , ನಂದೇಶ್ವರ ಗೂಡ್ಡೋಡಗಿ , ಚಿದಂಬರ ಅಂಗಡಿ , ವಿಜಯ ಜಾಧವ , ಮಪಿಸಿ ಶೋಭಾ ನಾಯ್ಕ , ಚಾಲಕರಾದ ಕೃಷ್ಣ ಮಾತ್ರೋಜಿ , ಹಾಗೂ ಕಾರವಾರದ ಅಪರಾಧ ವಿಭಾಗದ ಸಿಬ್ಬಂದಿಗಳಾದ ದೇವರಾಜ ಮತ್ತು ರಾಜೇಶ ನಾಯಕ ಇವರು ಸಹ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಈ ಪ್ರಕರಣಗಳನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ತನಿಖಾ ಕಾರ್ಯವನ್ನು ಪ್ರಶಂಸಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್