ನಗರದಲ್ಲಿ ಅಕ್ರಮವಾಗಿ (ತಿಮಿಂಗಲದ ವಾಂತಿ) ಅಂಬರ್ ಗ್ರೀಸ್ ಮತ್ತು ಪುರಾತನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಬಂಧಿಸಿದೆ. ಆ್ಯಂಬರ್ ಗ್ರಿಸ್ ಸೇರಿದಂತೆ ಪುರಾತನ ವಸ್ತುಗಳನ್ನ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್ ನಿಂದ ಬರೋಬ್ಬರಿ 80 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದ್ದು, ಪ್ರಕರಣ ಸಂಬಂಧ ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40) ಸಂತೋಷ್ (31), ಜಗನ್ನಾಥಾಚಾರ್ (52)ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆರೋಪಿಗಳು ಬಾಗಲಗುಂಟೆ ಬಳಿಯ ಕಟ್ಟಡವೊಂದರಲ್ಲಿ ಪುರಾತನ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಬಂಧಿತರ ಬಳಿ 80 ಕೆ.ಜಿ ಅಂಬರ್ ಗ್ರಿಸ್, ಬ್ರಿಟಿಷ್ ಈಸ್ಟ್ ಇಂಡಿಯಾ ಕಾಲದ ರೆಡ್ ಮರ್ಕ್ಯೂರಿ ಬಾಟಲ್, ಸ್ಟೀಮ್ ಫ್ಯಾನ್ ಜಫ್ತಿ ಮಾಡಿದ್ದಾರೆ.

ಇನ್ನೂ ಅಂಬರ್ ಗ್ರಿಸ್ ಗೆ ವಿದೇಶದಲ್ಲಿ ಬಾರಿ ಬೇಡಿಕೆಯಿದ್ದು, ಸುಗಂಧ ದ್ರವ್ಯಕ್ಕೆ ಇದನ್ನು ಉಪಯೋಗ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಅಂಬರ್ ಗ್ರಿಸ್ ಒಂದು ಕೆಜಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಬೆಲೆ ಇದೆ ಎನ್ನಲಾಗಿದೆ. ಸದ್ಯ ಈ ನಾಲ್ವರು ಆರೋಪಿಗಳಿಗೆ ಇಷ್ಟು ಅಮೂಲ್ಯವಾದ ವಸ್ತುಗಳು ಸಿಕ್ಕಿದಾದಾದರೂ ಹೇಗೆ ಎನ್ನುವುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
