
ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2020 ಸಮಾರೋಪ ಸಮಾರಂಭ. ದಿನಾಂಕ: 11-03-2021 ರಂದು ಉದ್ಘಾಟನೆಗೊಂಡು 3 ದಿನಗಳ ಕಾಲ ನಡೆದ 2020 ನೇ ಸಾಲಿನ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ದಿನಾಂಕ: 13-03-2021 ರಂದು ಸಂಜೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಪ್ರವೀಣ್ ಮಧುಕರ್ ಪವಾರ್ ಐ.ಪಿ.ಎಸ್, ಐ.ಜಿ.ಪಿ ದಕ್ಷಿಣ ವಲಯ, ಮೈಸೂರು ರವರು ಆಗಮಿಸಿ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾದ ಕೊಡಗು ಜಿಲ್ಲಾ ಪೊಲೀಸ್ ಘಟಕದ ವಿವಿಧ ಪೊಲೀಸ್ ಠಾಣೆ ಮತ್ತು ಇತರೆ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಹುಮಾನ ವಿತರಣೆ ಮಾಡಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯವರು, ನಿವೃತ್ತ ಪೊಲೀಸ್ ಅಧಿಕಾರಿ & ಸಿಬ್ಬಂದಿಯವರು, ಪೊಲೀಸ್ ಕುಟುಂಬಸ್ಥರು, ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದು ಕಾರ್ಯಕ್ರಮದ ರೂವಾರಿಗಳು ಹಾಗೂ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕ್ಷಮಾ ಮಿಶ್ರಾ, ಐ.ಪಿ.ಎಸ್ ರವರು ಸ್ವಾಗತ ಭಾಷಣ ಮಾಡಿದ್ದು ವಿರಾಜಪೇಟೆ ಉಪವಿಭಾಗದ ಡಿವೈ.ಎಸ್.ಪಿ ಶ್ರೀ ಜಯಕುಮಾರ್ ಸಿ.ಟಿ ರವರು ವಂದಿಸಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್