ದಿನಾಂಕ:11-05-2024 ರಂದು ಬೆಂಗಳೂರು ನಗರದಲ್ಲಿ ಅಪರಾಧಗಳನ್ನು ತಡೆಗಟ್ಟಲು ವಿಶೇಷ ಕಾರ್ಯಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ ವಾರೆಂಟ್/ಎನ್.ಬಿ.ಡಬ್ಲ್ಯೂ/ ಎಲ್ ಪಿಆರ್ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸುವ ಸಲುವಾಗಿ, ಬಸವನಗುಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಬಾರ್‌ವೊಂದರಲ್ಲಿದ್ದ ವ್ಯಕ್ತಿಗಳನ್ನು MCCTNS ನಲ್ಲಿ ಬೆರಳು ಮುದ್ರೆ ತಪಾಸಣೆ ಮಾಡುವಾಗ, ಹೊಸಕೋಟೆ ಟೌನ್ ಪೊಲೀಸ್ ಠಾಣೆಯ ಕೊಲೆಗೆ ಯತ್ನ ಪ್ರಕರಣದ ಓರ್ವ ಆರೋಪಿಯು ಪತ್ತೆಯಾಗಿದ್ದು, ಈತನು 2 ವರ್ಷಗಳಿಂದ ಮಾನ
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇರುವುದರಿಂದ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ಜಾಮೀನು ರಹಿತ ವಾರೆಂಟ್ (NBW) ನ್ನು ಹೊರಡಿಸಿರುವುದಾಗಿ ತಿಳಿದು ಬಂದಿರುತ್ತದೆ. ಈತನನ್ನು ವಶಕ್ಕೆ ಪಡೆದು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಈ ಕುರಿತು
ಹೊಸಕೋಟೆ ಪೊಲೀಸ್ ಠಾಣೆ ಯವರಿಗೆ ಮಾಹಿತಿಯನ್ನು ನೀಡಲಾಗಿರುತ್ತದೆ.
ಈ ಕಾರ್ಯವನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ
ಜಗಲಾಸ, ಐ.ಪಿ.ಎಸ್ ರವರ ನಿರ್ದೇಶನದಂತೆ ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್
ಆಯುಕ್ತರಾದ ಶ್ರೀ.ನಾರಾಯಣಸ್ವಾಮಿ ವಿ ರವರ ಮಾರ್ಗದರ್ಶನದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಯವರ ತಂಡ ಯಶಸ್ವಿಗೊಳಿಸಿರುತ್ತಾರೆ.