ರಾಜ್ಯ ಸರ್ಕಾರವು ರಾಜ್ಯದಲ್ಲಿ ಹುಕ್ಕಾಬಾರ್‌ಗಳನ್ನು ನಿಷೇಧಿಸಿ ಆದೇಶಿಸಿದ್ದು, ಅದರಂತೆ ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಹುಕ್ಕಾಕೇಂದ್ರಗಳ ಮೇಲೆ ದಾಳಿ ಮುಂದುವರೆಸಿರುತ್ತಾರೆ. ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್, ಹೆಚ್.ಎ.ಎಲ್ ಮತ್ತು ಕೆ.ಆರ್.ಪುರಂ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಒಟ್ಟು 07 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಪಡಿಸಿಕೊಂಡ ವ್ಯಕ್ತಿಗಳಿಂದ 7.12,50,000/-(ಹನ್ನೇರಡು ಲಕ್ಷದ ಐವತ್ತು ಸಾವಿರ ರೂಪಾಯಿ) ಮೌಲ್ಯದ ಹುಕ್ಕಾ ಪ್ಲೇವರ್‌ಗಳು ಹಾಗೂ ಇದರ ಸಲಕರಣೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರವಾಗಿ ತೆರೆಯಲಾಗಿದ್ದ ಹುಕ್ಕಾಬಾರ್‌ನ ಮೇಲೆ ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವರುಗಳ ವಶದಿಂದ ಅಂದಾಜು ಕೆ.2 ಲಕ್ಷ ಮೌಲ್ಯದ 05 ಹುಕ್ಕಾ ಪಾಟ್‌ಗಳು, ಹುಕ್ಕಾ ಪ್ಲೇವರ್‌ಗಳು, ಚಾರ್‌ಕೋಲ್ ಬಾಕ್ಸ್ ಮತ್ತು ಹುಕ್ಕಾ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್.ಎ.ಎಲ್. ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರವಾಗಿ ತೆರೆಯಲಾಗಿದ್ದ ಹುಕ್ಕಾಬಾರ್‌ನ ಮೇಲೆ ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವರುಗಳ ವಶದಿಂದ ಕೆ 10 ಲಕ್ಷ ಮೌಲ್ಯದ 710 ಹುಕ್ಕಾ ಪ್ಲೇವರ್‌ಗಳು, ಹುಕ್ಕಾ ಪ್ಯಾಕೇಟ್ -36 ಸೆಟ್, ಫಾಯಿಲ್ ಪೇಪರ್ 28 ಬಾಕ್ಸ್, ಪಿಲ್ಟರ್‌ಗಳು-19, ಹುಕ್ಕಾ ಪೈಪ್ -25 ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್.ಪುರಂ ಪೊಲೀಸ್ ಠಾಣಾ ಸರಹದ್ದಿನ ಕಾನೂನು ಬಾಹಿರವಾಗಿ ತೆರೆಯಲಾಗಿದ್ದ ಹುಕ್ಕಾಬಾರ್‌ನ ಮೇಲೆ ದಾಳಿ ನಡೆಸಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವರುಗಳ ವಶದಿಂದ 03 ಹುಕ್ಕಾ ಪ್ಲೇವರ್‌ಗಳು, ಹುಕ್ಕಾ ಪಾಟ್-05 ಸೆಟ್ ಮತ್ತು ನಗದು ಹಣವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವುಗಳ ಮೌಲ್ಯ ಕೆ 50 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.