ಚಿತ್ರದುರ್ಗ : ದಿನಾಂಕ: 05.07.2023 ರಂದು ಬೆಳಗಿನ ಜಾವ 01-00 ಗಂಟೆಯಿಂದ 04-00 ಗಂಟೆಯ ನಡುವ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ಹತ್ತಿರ ಸರ್ವಿಸ್ ರಸ್ತೆಯಲ್ಲಿ ಲಾರಿ ಚಾಲಕನಾದ ರಾಕೇಶ್ ಲವಶಿ ತಂದೆ ಬನೆಸಿಂಗ್ ಲವಶಿ, ಸುಮಾರು 34 ವರ್ಷ, ಬಾವಡಿ ಖೇಡ ಗ್ರಾಮ, ಪಚೋರಿ ತಾಲ್ಲೂಕು, ರಾಜಘಡ ಜಿಲ್ಲೆ, ಮಧ್ಯಪ್ರದೇಶ ರಾಜ್ಯ ಇವರನ್ನು ಯಾರೋ 04 ಜನ ದುಷ್ಕರ್ಮಿಗಳು ಹಲ್ಲೆ ಮಾಡಿ ಕೈಕಾಲುಗಳನ್ನು ಕಟ್ಟಹಾಕಿ ಒಂದು ಹೊಲದಲ್ಲಿ ಬಿಸಾಕಿ ಅವನು ಚಲಾಯಿಸುತ್ತಿದ್ದ ಲಾರಿಯ 10 ಹೊಸ ಟೈರುಗಳನ್ನು ಮತ್ತು ಲಾರಿಯಲ್ಲಿರುವ 80 ಲೀಟರ್ ಡೀಸೆಲನ್ನು ಮತ್ತು ಆತನ ಮೊಬೈಲನ್ನು ಕಿತ್ತುಕೊಂಡು ಹೋದ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ನಂ: 271/2023 ಕಲಂ: 394, 397 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಮಾಲು ಆರೋಪಿಗಳ ಪತ್ತೆಗಾಗಿ ಶ್ರೀ ಕೆ.ಪರಶುರಾಮ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಮಾನ್ಯ ಶ್ರೀ ಎಸ್.ಹೆ ಕುಮಾರಸ್ವಾಮಿ ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಚೈತ್ರ ಡಿ.ವೈ.ಎಸ್.ಪಿ, ಹಿರಿಯೂರು ಉಪವಿಭಾಗ ರವರ ನೇತೃತ್ವದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಈ. ಕಾಳಕೃಷ್ಣ, ಪಿ.ಎಸ್.ಐ. ಸಚಿನ ಚಿರಾದಾರ, ಎ.ಎಸ್.ಐ. ಪ್ರಭುಅಂಗಣ್ಣ ಮತ್ತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಮಹಮ್ಮದ್ ಹನೀಫ್ ಹಡಗಲಿ, ಸಿದ್ದಪ್ಪ, ಗೌರೀಶ್, ತಿಪ್ಪಾಭೋವಿ, ಅನಿಲ್ ಕುಮಾರ್, ಹರೀಶ್ ಕುಮಾರ್, ಪ್ರವೀಣ್ ಕುಮಾರ್, ಮಂಜುನಾಥ್, ಪರಮೇಶಿ, ಹಾಫರ್ ಸಾಧಿಕ್, ಪ್ರಸನ್ನ, ಈರಣ್ಣ ಸಾಲೋಡಗಿ, ಎಪಿಸಿ ಹರ್ಷ ರವರುಗಳನ್ನೊಳಗೊಂಡ ತಂಡವು ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಪ್ರಕರಣವನ್ನು ಭೇದಿಸಿ ಪ್ರಕರಣದಲ್ಲಿ ಭಾಗಿಯಾದ ಅಂತರಾಜ್ಯ ಸುಲಿಗೆಕಾರರಾದ
1] ದ್ಯಾನೇಶ್ವರ ತಂದೆ ಭಾಗವತ್ ಶಿಂಧೆ ಸು.25ವರ್ಷ ಡ್ರೈವರ್ ಕೆಲಸ ಕುಂತಲಗಿರಿ ಗ್ರಾಮ ಭೂಮ್ ತಾಲ್ಲೂಕು ಉಸ್ಮನಾಬಾದ್ ಜಿಲ್ಲೆ ಮಹಾರಾಷ್ಟ್ರ ರಾಜ್ಯ
2] ಬಾಲಾಜಿ ತಂದೆ ಭೀಮರಾವ್ ಸು.35 ವರ್ಷ ಧನಗ ಜನಾಂಗ ರಾಮಕುಂಡ್ ಗ್ರಾಮ್ ಭೂಮ್ ತಾಲ್ಲೂಕು ಉಸ್ಮನಾಬಾದ್ ಜಿಲ್ಲೆ ಮಹಾರಾಷ್ಟ್ರ ರಾಜ್ಯ
3] ರಾಹುಲ್ ತಂದೆ ಲಾಲಾಶಿಂಧೆ ಸು.22ವರ್ಷ ಜಿರಾಯ್ತಿ ಕೆಲಸ ಕಂಬಳೇಶ್ವರಿ ಪಿಂಪಳ ಗ್ರಾಮ ವಾಸಿ ತಾಲ್ಲೂಕು ಉಸ್ಮನಾಬಾದ್
ಜಿಲ್ಲೆ ಮಹಾರಾಷ್ಟ್ರ ರಾಜ್ಯ
4] ರುಹಿದಾಸ್ ತಂದೆ ಲಾಲಾಶಿಂಧೆ ಸು.20ವರ್ಷ ಜಿರಾಯ್ತಿ ಕೆಲಸ ಕಂಬಳೇಶ್ವರಿಪಿಂಪಳ ಗ್ರಾಮ ವಾಸಿ ತಾಲ್ಲೂಕು ಉಸ್ಮನಾಬಾದ್
ಜಿಲ್ಲೆ ಮಹಾರಾಷ್ಟ್ರ ರಾಜ್ಯ ರವರನ್ನು ದಸ್ತಗಿರಿ ಮಾಡಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣಗಳು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣ, ಕೊಪ್ಪಳದ ಬೇವೂರ ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿದ್ದು, ಪ್ರಕರಣಗಳಗೆ ಸಂಬಂಧಪಟ್ಟ 2 ಲಕ್ಷ ಮೌಲ್ಯದ 10 ಟೈರುಗಳನ್ನು ಮತ್ತು 7 ಸಾವಿರ ರೂಪಾಯಿ ಮೌಲ್ಯದ 80 ಲೀಟರ್ ಡೀಸೆಲನ್ನು, 10 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟಂತಹ 54 ಸಾವಿರ ರೂಪಾಯಿ
ಬೆಲೆಯ 02 ಟೈರುಗಳನ್ನು ಒಟ್ಟಾರೆಯಾಗಿ 12,61,000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಪ್ರಕರಣ ದಾಖಲಾಗಿ 24 ಗಂಟೆಯ ಒಳಗೆ ಪ್ರಕರಣವನ್ನು ಭೇದಿಸಿದ ಹಿರಿಯೂರು ಗ್ರಾಮಾಂತರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.