ಸಂಜಯನಗರ ಪೊಲೀಸ್ ವ್ಯಾಪ್ತಿಯ ಎ.ಇ.ಸಿ.ಎಸ್ ಲೇಔಟ್‌ನಲ್ಲಿ ವಾಸವಿರುವ ಫಿರಾದುದಾರರು ದಿನಾಂಕ:10/05/2024 ರಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ದಿನಾಂಕ:10/05/2024 ರಂದು ಬೆಳಿಗ್ಗೆ 10-45 ಗಂಟೆಗೆ ಸಮಯದಲ್ಲಿ ಹೆಬ್ಬಾಳದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಫಿರಾದುದಾರರ ಮಗಳೊಂದಿಗೆ ಹೋಗಿರುತ್ತಾರೆ. ಫಿರಾದುದಾರರ ಮನೆ ಕೆಲಸದಾಕೆಯು ಮಧ್ಯಾಹ್ನ 01-45 ಗಂಟೆಗೆ ಮನೆಯ ಕೆಲಸಕ್ಕೆಂದು ಪಿರಾದಿಯ ಮನೆಗೆ ಬಂದಿರುತ್ತಾರೆ. ಫಿರಾದಿಯವರ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ, ಫಿರಾದಿಯವರಿಗೆ ಮೊಬೈಲ್ ಮೂಲಕ ತಿಳಿಸಿರುತ್ತಾರೆ. ಫಿರಾದಿಯವರು ಆಸ್ಪತ್ರೆಯಿಂದ ವಾಪಸ್ಸು ಮನೆಗೆ ಬಂದು ನೋಡಲಾಗಿ ಮನೆಯ ಮುಂಬಾಗಿಲಿನ ಗೇಟಿನ ಲಾಕನ್ನು ಕಟ್ ಮಾಡಿರುತ್ತಾರೆ. ಮನೆಯ ಒಳಗಿರುವ ಬೆಡರೂಂ ಕಬೋರ್ಡ್ ಬೀಗ ಹೊಡೆದು ಕಬೊರ್ಡ್‌ನಲ್ಲಿರುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಪಡೆದುಕೊಂಡು ದಿನಾಂಕ:29/05/2024 ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ವ್ಯಕ್ತಿಯು ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:29/05/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 11 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು. ತನಿಖೆಯನ್ನು ಮುಂದುವರೆಸಿ, ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಯು ತನ್ನ ಇತರೆ ಇಬ್ಬರು ಸಹಚರರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿರುತ್ತಾನೆ. ದಿನಾಂಕ:10/06/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಆರೋಪಿಯು ನೀಡಿದ ಮಾಹಿತಿ ಆಧರಿಸಿ, ಕೃತ್ಯದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಪತ್ತೆಗಾಗಿ ಉತ್ತರ ಪ್ರದೇಶ ರಾಜ್ಯಕ್ಕೆ ತೆರೆಳಿ ತಲಾಷೆ ಮಾಡಲಾಗಿ ಇಬ್ಬರು ಆರೋಪಿಗಳನ್ನು ಘಾಜಿಯಬಾದ್ ನಗರದ ಭರತ್ ಮಾತ ಚೌಕ್ ಹತ್ತಿರ ದಿನಾಂಕ:09/03/2024 ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ದಿನಾಂಕ: 12/08/2024 ರಂದು ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 13 ದಿನಗಳ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆ ಮುಂದುವರೆಸಿ, ದಿನಾಂಕ:16/03/2024 ರಂದು ಉತ್ತರಪ್ರದೇಶದ ಒಂದು ಜ್ಯೂವೆಲರಿ ಶಾಪ್ ನಲ್ಲಿ ಕಳವು ಮಾಡಿದ್ದ 250 ಗ್ರಾಂ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದನ್ನು ವಶಪಡಿಸಿಕೊಳ್ಳಲಾಯಿತು.