ರಾಜಗೋಪಾಲನಗರ ಪೊಲೀಸ್ ವ್ಯಾಪ್ತಿಯ ಲಗ್ಗೆರೆಯಲ್ಲಿರುವ ಪಿರಾದಿಯು ದಿನಾಂಕ: 12-12-2023 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿರುತ್ತಾನೆ. ಅದೇ ದಿನ ಸಂಜೆ ಕೆಲಸ ಮುಗಿಸಿಕೊಂಡು ಮನೆಯ ಬಳಿ ಬಂದು ನೋಡಲಾಗಿ ಮನೆಯ ಬಾಗಿಲ ಬೀಗ ಮುರಿದು, ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳು ಮತ್ತು ಬೆಳ್ಳಿಯ ಅಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ದೂರನ್ನು ನೀಡಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲನಗರ ಪೊಲೀಸರು ಈ ಪ್ರಕರಣದ ತನಿಖೆ ಕೈಗೊಂಡು ಕೃತ್ಯದಲ್ಲಿ ಭಾಗಿಯಾಗಿದ್ದ 6 ವ್ಯಕ್ತಿಗಳ ಪೈಕಿ 4 ವ್ಯಕ್ತಿಗಳನ್ನು ದಿನಾಂಕ: 18/12/2023 ರಂದು ವಶಕ್ಕೆ ಪಡೆದು, ಅವರುಗಳಿಂದ 3 12 ಲಕ್ಷ ಬೆಲೆ ಬಾಳುವ 254 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆಯನ್ನು ಮುಂದುವರೆಸಿ, ತಲೆಮೆರೆಸಿಕೊಂಡಿದ್ದ ಮತ್ತಿಬ್ಬರು ವ್ಯಕ್ತಿಗಳನ್ನು ದಿನಾಂಕ: 06/01/2024 ರಂದು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳನ್ನು ವಿಚಾರಣೆ ಮಾಡಿ, ಅವರಿಂದ 7.05 ಲಕ್ಷ ಬೆಲೆ ಬಾಳುವ 121 ಗ್ರಾಂ ಚಿನ್ನಾಭರಣ ಮತ್ತು 11 ಲಕ್ಷ ನಗದು ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ವಶಕ್ಕೆ ಪಡೆದಿರುವ ಇಬ್ಬರು ವ್ಯಕ್ತಿಯ ಪೈಕಿ ಒಬ್ಬ ವ್ಯಕ್ತಿಯು ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿಯಾಗಿರುತ್ತಾನೆ. ಈ ಹಿಂದೆ ಆತನ ವಿರುದ್ಧ ಮಹಾಲಕ್ಷ್ಮೀಲೇಔಟ್, ಪೀಣ್ಯ, ಬ್ಯಾಡರಹಳ್ಳಿ, ಗಂಗಮ್ಮಗುಡಿ, ರಾಜಗೋಪಾಲನಗರ ಪೊಲೀಸ್ ಠಾಣೆಯ ಹಗಲು & ರಾತ್ರಿ ಕನ್ನಾ ಕಳವು, ಮನೆ ಕಳವು, ದೊಂಬಿ, ಶಸ್ತ್ರ ಕಾಯ್ದೆಯಡಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜೈಲಿಗೆ ಹೋಗಿ ಬಂದಿರುತ್ತಾನೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ.ಸೈದುಲು ಅಡಾವತ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ. ಸದಾನಂದ ಎ ತಿಪ್ಪಣ್ಣವರ್, ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯ ಉಪ ವಿಭಾಗ ರವರ ನೇತೃತ್ವದಲ್ಲಿ, ರಾಜಗೋಪಾಲನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಪುನೀತ್ ಬಿ.ಎನ್. ಮತ್ತು ಸಿಬ್ಬಂದಿಯವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.