ದಿನಾಂಕ:-22-07-2023 ರಂದು ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:-01-01-2023 ರಿಂದ ಇಲ್ಲಿಯವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳುವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತು ಪಡಿಸಿಕೊಂಡಿದ್ದು, ಈ ಸಂಬಂಧವಾಗಿ ದಾವಣಗೆರೆ ಡಿ.ಎ.ಆರ್ ಕವಾಯತ್ತು ಮೈದಾನದಲ್ಲಿ ಸದರಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾಲಗಳನ್ನು ಅವುಗಳ ವಾರಸುದಾರರಿಗೆ ಹಿಂದಿರುಗಿಸುವ ಸಂಭಂದವಾಗಿ “ಪ್ರಾಪರ್ಟಿ ರಿಟರ್ನ ಪೆರೇಡ್” ನ್ನು ಹಮ್ಮಿಕೊಂಡಿದ್ದು ಸದರಿ ಪ್ರಾಪರ್ಟಿ ರಿಟರ್ನ ಪೇರೆಡ್‌ನ್ನು ಶ್ರೀ ರಾಮಗೊಂಡ ಬಿ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ರವರು ನಡೆಸಿಕೊಟ್ಟಿದ್ದು ಸದರಿ ಪ್ರಾಪರ್ಟಿ ರಿಟರ್ನ ಪೆರೇಡ್‌ನಲ್ಲಿ ಶ್ರೀ ಮಲ್ಲೇಶ್ ದೊಡ್ಡಮನಿ, ದಾವಣಗೆರೆ ನಗರ ಉಪವಿಭಾಗ, ಶ್ರೀ ಬಿ.ಎಸ್. ಬಸವರಾಜ್ ಡಿ.ಎಸ್.ಪಿ., ಡಿಸಿಆ.ಬಿ ಘಟಕ, ದಾವಣಗೆರೆ ಜಿಲ್ಲೆ, ಶ್ರೀ ಯಶವಂತ್ ಪ್ರೋ|| ಡಿ.ಎಸ್.ಪಿ, ಶ್ರೀ ಅನಿಲ್ ಆರ್.ಪಿ, ಸಿಪಿಐ ಸಂಚಾರ ವೃತ್ತ, ಶ್ರೀ ಧನಂಜಯ ಪಿ.ಐ ಬಡಾವಣೆ ಪೊಲೀಸ್ ಠಾಣೆ, ಶ್ರೀ ಶಶಿಧರ್ ಪಿ.ಐ ಕೆ.ಟಿ.ಜೆ ನಗರ ಪೊಲೀಸ್ ಠಾಣೆ, ಶ್ರೀ ಇಮ್ರಾನ್ ಬೇಗ್ ಆಜಾದ್ ನಗರ ಪೊಲೀಸ್ ಠಾಣೆ, ಶ್ರೀ ಗುರುಬಸವರಾಜ್ ಪಿ.ಐ, ಬಸವನಗರ ಪೊಲೀಸ್ ಠಾಣೆ, ಪಿ.ಎಸ್.ಐರವರಾದ ಶ್ರೀ ಅಂಜಿನಪ್ಪ, ಶ್ರೀ ಅಕ್ಟರ್ ಮುಲ್ಲಾ, ಶ್ರೀಮತಿ ರೇಣುಕ ಜಿಎಂ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಪ್ರಮೀಳಮ್ಮ, ಶ್ರೀಮತಿ ನಿಂಗಮ್ಮ, ಶ್ರೀಮತಿ ಶಮೀಮ್ ಉನ್ನೀಸಾ, ಹಾಗೂ ದಾವಣಗೆರೆ ನಗರ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿರುತ್ತಾರೆ.