ಕಲಬುರಗಿ ನಗರದ ವಿವಿಧ ಏರಿಯಾಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಜರುಗುತ್ತಿದ್ದು, ಮೋಟಾರ್ ಸೈಕಲ್ ಪತ್ತೆಗಾಗಿ ಕಲಬುರಗಿ ನಗರ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್ (ಕಾ&ಸೂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ, ಮತ್ತು ಶ್ರೀ ಐ.ಎ.ಚಂದ್ರಪ್ಪ ಕೆ.ಎಸ್.ಪಿ.ಎಸ್ (ಅ&ಸಂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಭೂತೇಗೌಡ ಸಹಾಯಕ ಪೊಲೀಸ ಆಯುಕ್ತರು ದಕ್ಷಿಣ ಉಪ ವಿಭಾಗ ರವರುಗಳ ನೇತೃತ್ವದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸ್‌ಪೆಕ್ಟರವರಾದ ಶ್ರೀ ಸೋಮಲಿಂಗ ಕಿರೇದಳ್ಳಿ ಮತ್ತು ಶ್ರೀಮತಿ ವಂದನಾ ಪಿ.ಎಸ್.ಐ, ನದ್ದುಮೊದ್ದೀನ್, ಎ.ಎಸ್.ಐ. ಹಾಗೂ ಅಪರಾಧ ಪತ್ತೆದಳ ಸಿಬ್ಬಂದಿರವರಾದ ದೇವೆಂದ್ರ, ಶಿವಾನಂದ, ಮೋಸಿನ, ಫಿರೋಜ, ಬೊಗೇಶ, ವಿಠಲ, ಸಂಗಣ್ಣರವರನ್ನೊಳಗೊಂಡ ತಂಡವು ಮಾಹಿತಿ ಕಲೆ ಹಾಕಿ ದಿನಾಂಕ 21-06-2023 ರಂದು ಆರೋಪಿತರಾದ 1) ಮಿಥುನ ತಂದೆ ಸುಭಾಷ ಜಾಧವ ಸಾ|| ಬಾಹು ನಾಯಕ ತಾಂಡಾ ನಂದೂರ ಎಂಬುವವನು ಸ್ಟೇಷನ ಬಜಾರ ಪೊಲೀಸ ಠಾಣೆ, ಎಂ.ಬಿ.ನಗರ ಪೊಲೀಸ ಠಾಣೆ ಹಾಗೂ ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡಿ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಮಾಡಿ ನಕಲಿ ನಂಬರ್ ಪ್ಲೇಟ್ ಹಾಕಿ ಮಾರುತ್ತಿದ್ದನು. ಕಳ್ಳತನ ಮಾಡಿದ ವಾಹನಗಳನ್ನು ಸ್ವೀಕರಿಸುವ ಆರೋಪಿತನಾದ 2) ದೀಪಕ ತಂದೆ ಮನೋಹರ ಆಡೆ ಸಾ|| ಹತ್ಯಾಳ ತಾಂಡಾ ಬೀದರ್ ಜಿಲ್ಲೆ ಇವನಿಗೆ ಮಾರಾಟ ಮಾಡಿದ್ದ ವಿವಿಧ ಕಂಪನಿಯ 13 ಮೋಟಾರ್ ಸೈಕಲ್‌ಗಳು ಅಂ.ಕಿ. 7,00,000/- ರೂಪಾಯಿ ಬೆಲೆ ಬಾಳುವ ದ್ವಿ-ಚಕ್ರವಾಹನಗಳನ್ನು ಜಪ್ತಿಪಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ದಸ್ತಗಿರಿ ಕ್ರಮ ಕೈಗೊಂಡಿದ್ದು ಇರುತ್ತದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.